Mysore
20
clear sky

Social Media

ಗುರುವಾರ, 05 ಡಿಸೆಂಬರ್ 2024
Light
Dark

ಮೆಕಲಮ್‌ ಹೆಸರಿನಲ್ಲಿದ್ದ ವಿಶ್ವದಾಖಲೆ ಸರಿಗಟ್ಟಿದ ಜೈಸ್ವಾಲ್‌

ಕಳೆದ ಒಂದು ವರ್ಷದಿಂದ ಭಾರತದ ಟೆಸ್ಟ್‌ ಟೀಮ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಯಶಸ್ವಿ ಜೈಸ್ವಾಲ್‌ ಟೆಸ್ಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಸ್ಕಾರ್‌ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ‌ ಮೆಕಲಮ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ಬ್ರೆಂಡನ್‌ ಮೆಕಲಮ್‌ ಅವರ 10 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಒಂದೇ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯಲ್ಲಿ ಮೊದಲಿಗರಾದರು.

ಮೆಕಲಮ್‌ 2013ರಲ್ಲಿ ವರ್ಷದಲ್ಲಿ 33 ಸಿಕ್ಸರ್‌ಗಳನ್ನು ಬಾರಿಸಿದ್ದು ಟೆಸ್ಟ್‌ ಇತಿಹಾಸದಲ್ಲಿ ದಾಖಲೆಯಾಗಿತ್ತು. ಈಗ 12 ಟೆಸ್ಟ್‌ನಲ್ಲಿ 34 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಯಶಸ್ವಿ ಜೈಸ್ವಾಲ್‌ ಈ ಸಾಧನೆ ಮಾಡಿದ್ದಾರೆ.

ಒಂದು ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದವರ ಪಟ್ಟಿಯಲ್ಲಿ ಜೈಸ್ವಾಲ್ ಮೊದಲ ಸ್ಥಾನದಲ್ಲಿದ್ದರೆ, ಮೆಕಲಮ್‌ 33, ಬೆನ್‌ ಸ್ಟೋಕ್ಸ್ 26, ಗಿಲ್‌ಕ್ರಿಸ್ಟ್‌ 22, ಸೆಹ್ವಾಗ್‌ 22 ನಂತರದ ಸ್ಥಾನದಲ್ಲಿದ್ದಾರೆ.

2023ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್‌ ಭಾರತ ತಂಡದ ಪರವಾಗಿ ಆಡಿದ 15 ಟೆಸ್ಟ್‌ ಪಂದ್ಯಗಳಲ್ಲಿ 1495 ರನ್‌ ಗಳಿಸಿದ್ದು, ಇದರಲ್ಲಿ 3 ಶತಕ, 8 ಅರ್ಧ ಶತಕಗಳು ದಾಖಲಾಗಿವೆ. 214 ರನ್‌ ಅವರ ಗರಿಷ್ಠ ಸ್ಕೋರ್‌ ಆಗಿದೆ. 60.94ರ ಸರಾಸರಿಯಲ್ಲಿ ಜೈಸ್ವಾಲ್‌ ಬ್ಯಾಟ್‌ ಬೀಸಿದ್ದಾರೆ.

Tags: