Mysore
25
overcast clouds
Light
Dark

IPL 2024: ಭಯೋತ್ಪಾದಕರ ಶಂಕೆ ಹಿನ್ನೆಲೆ ಆರ್‌ಸಿಬಿ ಅಭ್ಯಾಸ ಪಂದ್ಯ ರದ್ದು.!

ಬೆಂಗಳೂರು:‌ ಐಪಿಎಲ್‌ ೨೦೨೪ರ ಎಲಿಮಿನೇಟರ್‌ ಪಂದ್ಯ ಆರ್‌ಸಿಬಿ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಇಂದು(ಮೇ.22) ರಾತ್ರಿ 7:30ಕ್ಕೆ ನಡೆಯಲಿದೆ.‌‌ ಈ ಹಿನ್ನೆಲೆ ಕರ್ನಾಟಕದ ಜನತೆ ಪಂದ್ಯ ಗೆಲ್ಲವು ಕಾತುರದಲ್ಲಿದ್ದಾರೆ ಜತೆಗೆ ಅಭಿಮಾನಿಗಳು ಹರ್ಷದಲ್ಲಿ ಮುಳುಗಿದ್ದಾರೆ, ಮತ್ತೊಂದೆಡೆ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಅವರಿಗೆ ಭದ್ರತೆ ಕುರಿತು ಆತಂಕ ಆವರಿಸಿದೆ. ಹೀಗಾಗಿ ಎಲಿಮಿನೇಟರ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ಫ್ರಾಂಚೈಸಿ ಮೂಲಕಗಳು ತಿಳಿಸಿವೆ.

ಅಲ್ಲದೇ ವಾಡಿಕೆಯಂತೆ ನಡೆಯುವ ಸುದ್ದಿಗೋಷ್ಠಿಯನ್ನೂ ಕೂಡ ಆರ್‌ಸಿಬಿ ನಡೆಸಲಿಲ್ಲ. ಈ ಅಸಹಜ ಬೆಳವಣಿವೆಯು ಹಲವರಲ್ಲಿ ಗೊಂದಲ ಮೂಡಿಸಿತು.

ಘಟನೆ ಸಂಬಂಧ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ಕು ಮಂದಿಯನ್ನು ಅಹಮದಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಭಯೋತ್ಪಾದಕರು ಇಂದು ನಡೆಯುವ ಆರ್‌ಸಿಬಿ, ಆರ್‌ಆರ್‌ ಪಂದ್ಯಗಳನ್ನು ಅದರಲ್ಲೂ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿಯನ್ನು ಗುರಿಯಾಗಿಸಿದ್ದರು ಎನ್ನಲಾಗುತ್ತಿದೆ. ಈ ಹಿನ್ನೆಲೆ ಪೊಲೀಸರು ಇಂದಿನ ಅಭ್ಯಾಸ ಹಾಗೂ ಪತ್ರಿಕಗೋಷ್ಠಿಯನ್ನು ರದ್ದುಗೊಳಿಸಿವಂತೆ ಪ್ರಾಂಚೈಸಿಗಳಿಗೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.

ಅಹಮದಾಬಾದ್‌ಗೆ ವಿರಾಟ್‌ ಕೊಹ್ಲಿ ಬಂದಿಳಿದ ನಂತರ ಭಯೋತ್ಪಾದಕರ ಬಂಧನದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅವರು ದೇಶದ ಸಂಪತ್ತು. ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಪ್ರಮುಖ ಆದ್ಯತೆ. ಹೀಗಾಗಿ ಆರ್‌ಸಿಬಿ ತಂಡದ ಆಟಗಾರರು ಅಭ್ಯಾಸ ನಡೆಸದಿರಲು ನಿರ್ಧರಿಸಿದರು. ಈ ಬೆಳವಣಿಗೆ ಕುರಿತು ರಾಜಸ್ಥಾನ ರಾಯಲ್ಸ್‌ ತಂಡಕ್ಕೂ ಮಾಹಿತಿ ನೀಡಲಾಗಿದೆ. ಆದರೆ ಆರ್‌ಆರ್‌ ಅಭ್ಯಾಸ ನಡೆಸಲು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಭ್ಯಾಸ ಮುಂದುವರೆಸಿದರು ಎಂದು ಪೊಲೀಸ್‌ ಅಧಿಕಾರಿ ವಿಜಯ್‌ ಸಿಂಗ್‌ ಜ್ವಾಲಾ ತಿಳಿಸಿದ್ದಾರೆ.

ಆರ್‌ಸಿಬಿ ತಂಡ ತಂಗಿರುವ ಹೋಟೆಲಿನ ಸುತ್ತ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ. ಐಪಿಎಲ್‌ ಮಾನ್ಯತೆ ಹೊಂದಿರುವ ಸದಸ್ಯರಿಗೂ ಹೋಟೆಲ್‌ ಒಳಗೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ. ಪಂದ್ಯ ನಡೆಯುವಾಗ ಬಿಗಿ ಭದ್ರತೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.