Mysore
25
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

IPL 2024: ಪ್ಲೇಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ; ಇದು ಆರ್‌ಸಿಬಿಯ ಹೊಸ ಅಧ್ಯಯ ಎಂದ ಸಿಎಂ

ಬೆಂಗಳೂರು: ನಿನ್ನೆ ನಡೆದ ಐಪಿಎಲ್‌ ಸೀನಸ್‌ 17ರ ನಿರ್ಣಯಕ ಹಂತದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಚೆನ್ನೈಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ 27ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಅಂತಿಮ ನಾಲ್ಕರ ಘಟಕ್ಕೆ ಅರ್ಹತೆ ಪಡೆಯಿತು.

ಟೂರ್ನಿಯಲ್ಲಿ ಸತತ 6 ಪಂದ್ಯಗಳನ್ನು ಸೋತು, ಬಳಿಕ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿಯ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಪ್ರದರ್ಶನದ ಬಗ್ಗೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿರುವ ಸಿಎಂ ಸಿದ್ದರಾಮಯ್ಯ, ಸತತ 6ನೇ ಗೆಲುವಿನೊಂದಿಗೆ ನಮ್ಮ ಆರ್‌ಸಿಬಿ ಪ್ಲೇಆಫ್‌ಗೆ ಲಗ್ಗೆಯಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದು, ಪ್ರತಿ ಕ್ಷಣವನ್ನು ಆಸ್ವಾದಿಸಿದೆ. ನಮ್ಮ ಆರ್‌ಸಿಬಿ ತಂಡದ ಐತಿಹಾಸಿಕ ಗೆಲುವಿನ ಕ್ಷಣಕ್ಕೆ ಸಾಕ್ಷಿಯಾಗಿದ್ದು ಖುಷಿಕೊಟ್ಟಿದೆ. ಇದು ಆರ್‌ಸಿಬಿಯ ಹೊಸ ಅಧ್ಯಯ ಎಂದು ಬರೆದುಕೊಂಡಿದ್ದಾರೆ.

https://x.com/siddaramaiah/status/1791904691929927867

ಇವರಿಗೆ ಜತೆಯಾಗಿ ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಜಿ. ಪರಮೇಶ್ವರ್‌, ಎಚ್‌.ಸಿ ಮಹದೇವಪ್ಪ ಸೇರಿದಂತೆ ಹಲವರು ಸಾಥ್‌ ನೀಡಿದರು.

ಫ್ಯಾನ್ಸ್‌ಗೆ ಕೃತಜ್ಞತೆ ಸಲ್ಲಿಸಿದ ಆರ್‌ಸಿಬಿ: ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದಿಂದ ಹಿಡಿದು ಪ್ಲೇಆಫ್‌ಗೆ ಕ್ವಾಲಿಫೈ ಆದ ಆರ್‌ಸಿಬಿ ತನ್ನ ಅಪಾರ ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿ ಧನ್ಯವಾದ ಅರ್ಪಿಸಿದ್ದಾರೆ. ಪಂದ್ಯದ ಬಳಿಕ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ತಂಡ ಧನ್ಯವಾದ ಅರ್ಪಿಸಿತು.

ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ತಂಡಕ್ಕೆ ತೋರಿದ ಅಭೂತಪೂರ್ವ ಬೆಂಬಲದ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮಧ್ಯರಾತ್ರಿ 1.30 ಗಂಟೆ ಸಮಯದಲ್ಲಿ ತಂಡದ ಆಟಗಾರರು ಬಸ್‌ ನಲ್ಲಿ ಪ್ರಯಾಣಿಸುವ ವೇಳೆ ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳು ಆರ್‌ಸಿಬಿ ಆರ್‌ಸಿಬಿ ಎಂದು ಕೂಗುತ್ತಾ ತಂಡದ ಗೆಲುವನ್ನು ಸಂಭ್ರಮಿಸಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

https://www.instagram.com/reel/C7H-89sBuXF/?igsh=eTR3NnE2eXZldXNt

ಇನ್ನು ರಾಜ್ಯಾದ್ಯಂತ ಅಭಿಮಾನಿಗಳು ಪಂದ್ಯ ಗೆದ್ದು, ಕ್ವಾಲಿಫೈ ಆದ ಖುಷಿಗೆ ರಾಜ್ಯಾದ್ಯಂತ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ.

ಇನ್ನು ಆರ್‌ಸಬಿ ತನ್ನ ಮೊದಲ ಕ್ವಾಲಿಫೈ ಪಂದ್ಯವನ್ನು ಬುಧವಾರ ರಾಜಸ್ಥಾನ್‌ ರಾಯಲ್ಸ್‌ ಇಲ್ಲ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಆಡಲಿದೆ.

Tags: