Mysore
26
broken clouds

Social Media

ಸೋಮವಾರ, 18 ಮೇ 2026
Light
Dark

ಪಾರಂಪರಿಕ ಕಟ್ಟಡ ಸಂರಕ್ಷಿಸಿ.. ಪರಂಪರೆ ಉಳಿಸಿ..!

ಪಾರಂಪರಿಕ ಕಟ್ಟಡಗಳ ಸ್ಥಿತಿ-ಗತಿ ಕುರಿತ ‘ಆಂದೋಲನ’ ಲೇಖನ ಸರಣಿಗೆ ಸಾರ್ವಜನಿಕರ ಮೆಚ್ಚುಗೆ

ಮೈಸೂರು: ಅರಮನೆ ನಗರಿಯ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಬಿಂಬಿಸುವ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಬೀಳುವ ಹಂತದಲ್ಲಿರುವ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪುರಾತತ್ವ, ವಸ್ತುಸಂಗ್ರಹ ಪುರಾತತ್ವ, ವಸ್ತುಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಮತ್ತು ಸರ್ಕಾರ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಗರದಲ್ಲಿರುವ ಪಾರಂಪರಿಕ ಕಟ್ಟಡಗಳ ಸ್ಥಿತಿ-ಗತಿಗಳನ್ನು ಕುರಿತು ‘ಆಂದೋಲನ’ ದಿನಪತ್ರಿಕೆ ಪ್ರಕಟಿಸಿದ ಸರಣಿ ಲೇಖನ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಸಂಬಂಧಪಟ್ಟವರ ನಿರ್ಲಕ್ಷ್ಯದಿಂದಲೇ ಪಾರಂಪರಿಕ ಕಟ್ಟಡಗಳಲ್ಲಿ ಬಿರುಕು ಬಿಡುತ್ತಿವೆ ಎಂಬ ಮಾತುಗಳನ್ನು ಹೇಳಿದ್ದಾರೆ.

” ಶಿಥಿಲ ಕಟ್ಟಡಗಳು ಕುಸಿದು ಅನಾಹುತ ಸಂಭವಿಸುವ ಮುನ್ನ ಅವುಗಳನ್ನು ಕೆಡವಲು ಅಧಿಕಾರಿ ವರ್ಗದವರು ಮುಂದಾಗಬೇಕು. ಇಲ್ಲದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇದರ ಬಗ್ಗೆ ಸರ್ಕಾರದ ಕಣ್ಣು ತೆರೆಸಿ ದ್ದಕ್ಕಾಗಿ ‘ಆಂದೋಲನ’ ದಿನ ಪತ್ರಿಕೆ ಧನ್ಯವಾದಗಳು.”

-ಕಾರ್ತಿಕ್, ಸ್ಥಳೀಯ

” ಲ್ಯಾನ್ಸ್‌ಡೌನ್ಸ್ ಕಟ್ಟಡವು ಮೈಸೂರಿನ ಪರಂಪರೆಯನ್ನುಮ ಬಿಂಬಿಸುತ್ತದೆ. ಕಟ್ಟಡ ಕುಸಿದು ದಶಕಗಳೇ ಕಳೆದರೂ ಕಟ್ಟಡವನ್ನು ಸಮರ್ಥ ರೀತಿಯಲ್ಲಿ ನಿರ್ವಹಣೆ ಮಾಡುವ ಇಚ್ಛಾಶಕ್ತಿಯನ್ನು ಸರ್ಕಾರಗಳು ತೋರಲಿಲ್ಲ. ಸುಪ್ರೀಂ ಕೋರ್ಟ್ ಸಹ ಆದೇಶ ನೀಡಿದೆ. ಈಗಲಾದರೂ ಗಮನಹರಿಸಲಿ.”

-ಬಿ.ಪಿ.ಶಮಿತಾ ಪಾರಂಪರಿಕ ಕಟ್ಟಡಗಳು

” ಕೇವಲ ಕಟ್ಟಡಗಳಲ್ಲ. ಅವು ನಮ್ಮ ನಾಡಿನ ಚರಿತ್ರೆಯನ್ನು ಹೇಳುವ ಸ್ಮಾರಕಗಳು.ಮ ಇವುಗಳನ್ನು ಸಂರಕ್ಷಿಸಿಕೊಳ್ಳದೆ ನಾವು ಸಂಸ್ಕೃತಿ ಉಳಿಸುತ್ತೇವೆ ಎನ್ನುವ ಮಾತು ಸುಳ್ಳಾಗುತ್ತದೆ. ಸರ್ಕಾರ ಎಚ್ಚೆತ್ತು ಕೊಂಡು ಕಟ್ಟಡಗಳನ್ನು ನಿರ್ವಹಣೆ ಮಾಡಲಿ.”

-ಎಸ್.ಮಧು

” ಮೊದಲಿನಿಂದಲೂ ಪಾರಂಪರಿಕ ಕಟ್ಟಡಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡಿದ್ದರೆ ಇಂದು ಅವುಗಳು ದುಸ್ಥಿತಿಗೆ ತಲುಪುತ್ತಿರಲಿಲ್ಲ. ಬಾಯಿ ಮಾತಿನಲ್ಲಿ ಸಂಸ್ಕೃತಿ-ಆಚಾರ-ವಿಚಾರ ಎಂದು ಬೊಬ್ಬೆ ಹೊಡೆಯುವವರು ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಔದಾರ್ಯವನ್ನು ತೋರುತ್ತಿಲ್ಲ.”

-ಆನಂದ

” ಮೈಸೂರು ಸಂಸ್ಥಾನದ ವೈಭವದ ಕಥೆಯನ್ನು ಮೈಸೂರಿನ ಒಡಲೊಳಗೆ ಇರುವ ಪಾರಂಪರಿಕ ಕಟ್ಟಡಗಳೇ ಹೇಳುತ್ತವೆ. ಹಾಗಾಗಿ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಅನಗತ್ಯವಾಗಿ ವ್ಯಯಿಸುವ ಸರ್ಕಾರಗಳು ಪಾರಂಪರಿಕ ಕಟ್ಟಡಗಳ ನಿರ್ವಹಣೆಗೆ ಹಣ ನೀಡಿ ಕಟ್ಟಡಗಳನ್ನು ಸಂರಕ್ಷಿಸಲಿ.”

-ಮನೋಜ್‌ಕುಮಾರ್

” ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ದೃಷ್ಟಿಯಿಂದ ಪಾರಂಪರಿಕ ಕಟ್ಟಡ ಸಮಿತಿ ರಚಿಸಲಾಗಿದೆ. ಈ ತಂಡಕ್ಕೆ ಜಿಲ್ಲಾಧಿಕಾರಿಗಳೇ ಮುಖ್ಯಸ್ಥರು. ಪ್ರತಿ ೩ ತಿಂಗಳಿಗೊಮ್ಮೆ ಪಾರಂಪರಿಕ ಕಟ್ಟಡಗಳನ್ನು ಪರಿಶೀಲಿಸಬೇಕು ಎಂಬ ನಿಯಮವಿದೆ. ಆದರೆ, ಪರಿಶೀಲನೆ ನಡೆಸುತ್ತಿಲ್ಲ. ಸಣ್ಣ-ಪುಟ್ಟ ಸಮಸ್ಯೆಗಳು ಉದ್ಭವಿಸಿದ ಸಂದರ್ಭದಲ್ಲಿ ನಿರ್ವಹಣೆ ಮಾಡಿದ್ದರೆ ಕಟ್ಟಡಗಳು ಇಷ್ಟು ದುಸ್ಥಿತಿ ತಲುಪುತ್ತಿರಲಿಲ್ಲ.”

-ಭಾನು ಮೋಹನ್, ಪರಿಸರವಾದಿ

” ಸ್ಥಳೀಯ ಸಂಸ್ಥೆಗಳು, ಜಿಲ್ಲಾಡಳಿತ ಪಾರಂಪರಿಕ ಕಟ್ಟಡಗಳನ್ನು ನಿರ್ಲಕ್ಷಿಸಿರುವ ಕಾರಣದಿಂದ ಇಲ್ಲಿನ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಕಟ್ಟಡಗಳಲ್ಲಿ ಬಿರುಕು, ಗಿಡಗಳ ಬೇರು ಕಂಡಾಕ್ಷಣವೇ ನಿರ್ವಹಣೆಗೆ ಮುಂದಾದರೆ ಕಟ್ಟಡಗಳು ಸುಸ್ಥಿತಿಯಲ್ಲಿರಲು ಸಾಧ್ಯವಾಗುತ್ತಿತ್ತು.”

-ಪಿ.ಮರಂಕಯ್ಯ, ರೈತ ಮುಖಂಡ

” ಪಾರಂಪರಿಕ ಕಟ್ಟಡಗಳು ಮೈಸೂರಿನ ಗೌರವದ ಸಂಕೇತಗಳು. ಆದರೆ, ಇವುಗಳನ್ನು ಸಂರಕ್ಷಿಸುವ ಕೆಲಸವನ್ನು ಸ್ಥಳೀಯ ಆಡಳಿತ ಮಾಡುತ್ತಿಲ್ಲ. ನಗರಪಾಲಿಕೆ ನಿರ್ಲಕ್ಷ್ಯದಿಂದ ಕಟ್ಟಡಗಳು ಪಾಳು ಕೊಂಪೆಗಳಂತಾಗುತ್ತಿವೆ. ಪಾಲಿಕೆಯು ಬಜೆಟ್ ಮಂಡಿಸುತ್ತದೆ. ಆದರೆ, ಕಟ್ಟಡ ನಿರ್ವಹಣೆಗೆ ಹಣ ಮೀಸಲಿಡುತ್ತಿಲ್ಲ.”

-ಉಗ್ರನರಸಿಂಹೇಗೌಡ ಹೋರಾಟಗಾರ 

 

 

Tags:
error: Content is protected !!