Mysore
23
light rain

Social Media

ಮಂಗಳವಾರ, 18 ಆಗಸ್ಟ್ 2026
Light
Dark

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಅಂಬಾರಿ ಸಾರಥಿ ಅಭಿಮನ್ಯುವಿಗೆ ಈ ಬಾರಿ ಕೊಕ್‌ ನೀಡಲಾಗಿದೆ. ಕ್ಯಾಪ್ಟನ್‌ ಅಭಿಮನ್ಯು 2026ರ ದಸರಾ ಗಜಪಡೆಯ ಪಟ್ಟಿಯಿಂದ ಹೊರಗುಳಿದಿದ್ದಾನೆ. ಅಭಿಮನ್ಯುವಿಗೆ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದೀಗ ಈ ಬಾರಿ ಯಾರು ಅಂಬಾರಿ ಹೊರಲಿದ್ದಾರೆ ಎಂಬ ಕುತೂಹಲ ಮೈಸೂರು ಜನರಲ್ಲಿ ಮೂಡಿದೆ.

ಈ ಬಾರಿ ದಸರಾ ಗಜಪಡೆಯಲ್ಲಿ ಧನಂಜಯ, ಏಕಲವ್ಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ, ಕಾವೇರಿ, ರೂಪ, ಚೈತ್ರ ಹಾಗೂ ಶ್ರೀಕಂಠ ಸೇರಿದ್ದಾರೆ.

ಇನ್ನು ತುರ್ತು ಸಂದರ್ಭಕ್ಕಾಗಿ ಭೀಮ ಹಾಗೂ ಹರ್ಷನನ್ನು ಮೀಸಲು ಪಡೆಯಾಗಿ ಇರಿಸಲಾಗಿದೆ.

ಅಭಿಮನ್ಯು ಹೊರಗುಳಿದಿರುವ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬುದೇ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

 

Tags:
error: Content is protected !!