ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣಾ ಆಯೋಗ ವ್ಯವಸ್ಥಿತವಾಗಿ ಸಂಘಟಿತ ಅಪರಾಧ ಮಾಡುತ್ತಿದೆ. ಬಿಜೆಪಿಯವರು ಈ ಅಪರಾಧದಲ್ಲಿ ಪಾಲುದಾರರು. ಮುಸ್ಲಿಂರು ನಮಗೆ ಮತ ಹಾಕಲ್ಲ ಎಂದು ಮುಸ್ಲಿಂರ ಮತಗಳನ್ನ ಡಿಲೀಟ್ ಮಾಡಿಸುತ್ತಿದ್ದಾರೆ. ಬಿಜೆಪಿವರ ಜೊತೆ ಚುನಾವಣಾ ಆಯೋಗ ಶಾಮಿಲಾಗಿದೆ. ನಮಗೆ ಮೊದಲಿನಿಂದಲೂ ಎಸ್ಐಆರ್ ಬಗ್ಗೆ ಅನುಮಾನ ಇದೆ. ತಕ್ಷಣವೇ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಿಲ್ಲಬೇಕು. ಮುಸ್ಲಿಂಮರ ಮತಗಳನ್ನ ಡಿಲೀಟ್ ಮಾಡಿಸುವುದು ಬಹಳ ಸುಲಭ. ಹೆಸರಲ್ಲೇ ಅದು ಅವರ ಧರ್ಮ ಗೊತ್ತಾಗುತ್ತದೆ. ಜೊತೆಗೆ ಅವರು ಗುಂಪು ಗುಂಪಾಗಿಯೇ ಇರುತ್ತಾರೆ. ಹೀಗಾಗಿ ಸುಲಭವಾಗಿ ಅವರ ಹೆಸರುಗಳನ್ನ ಡಿಲೀಟ್ ಮಾಡಿಸಲಾಗುತ್ತಿದೆ. ಫಾರಂ ನಂಬರ್ 7ನಲ್ಲಿ ಆಕ್ಷೇಪಣೆ ಬೇರೆ ವಿಚಾರ. ಆದರೆ ಒಬ್ಬೊಬ್ಬರೇ ಬಲ್ಕಾಗಿ ಅರ್ಜಿ ತುಂಬಿದರೆ ಅದರ ಅರ್ಥ ಏನು. ಅವರಿಗೆ ಎಲ್ಲಾ ಎಫಿಕ್ ಕಾರ್ಡ್ ಗಳನ್ನ ಕೊಟ್ಟವರು ಯಾರು ಎಂದು ಪ್ರಶ್ನ ಮಾಡಿದರು.





