Mysore
23
overcast clouds
Light
Dark

ಐಪಿಎಲ್‌ ಇತಿಹಾಸದಲ್ಲೇ ಅತಿಹೆಚ್ಚು ಬೆಲೆಗೆ ಹರಾಜಾದ ದಾಖಲೆ ಬರೆದ ಪ್ಯಾಟ್‌ ಕಮಿನ್ಸ್‌

ಇಂದು ( ಡಿಸೆಂಬರ್‌ 19 ) ದುಬೈನಲ್ಲಿ ಇಂಡಿಯನ್‌ ಪ್ರೀಮಿಯರ್ ಲೀಗ್‌ನ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ಸ್‌ ಕಮಿನ್ಸ್‌ ಬರೋಬ್ಬರಿ 20.50 ಕೋಟಿ ರೂಪಾಯಿಗಳಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ಪಾಲಾಗಿದ್ದಾರೆ.

2 ಕೋಟಿ ರೂಪಾಯಿಗಳ ಮುಖಬೆಲೆಯೊಂದಿಗೆ ಹರಾಜಿಗೆ ಇಳಿದಿದ್ದ ವಿಶ್ವಕಪ್‌ ವಿನ್ನಿಂಗ್‌ ನಾಯಕನ ಖರೀದಿಗಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. 20.25 ಕೋಟಿ ರೂಪಾಯಿಗಳವರೆಗೂ ಬಿಡ್‌ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸನ್‌ ರೈಸರ್ಸ್‌ ಹೈದರಾಬಾದ್‌ 20.50 ಕೋಟಿ ಬಿಡ್‌ ಮಾಡಿದ ನಂತರ ರೇಸ್‌ನಿಂದ ಹಿಂದೆ ಸರಿಯಿತು.

ಈ ಮೂಲಕ ಈ ಹಿಂದೆ ಸ್ಯಾಮ್‌ ಕರನ್‌ ಹೆಸರಿನಲ್ಲಿದ್ದ ಅತಿಹೆಚ್ಚು ಮೊತ್ತಕ್ಕೆ ಬಿಡ್‌ ಆದ ಆಟಗಾರ ಎಂಬ ದಾಖಲೆಯನ್ನು ಪ್ಯಾಟ್ ಕಮಿನ್ಸ್‌ ಮುರಿದುಹಾಕಿದ್ದಾರೆ. ಕಳೆದ ಬಾರಿಯ ಹರಾಜಿನಲ್ಲಿ ಸ್ಯಾಮ್‌ ಕರನ್‌ ಅವರನ್ನು ಪಂಜಾಬ್ ಕಿಂಗ್ಸ್‌ ತಂಡ 18.5 ಕೋಟಿಗೆ ಖರೀದಿಸಿತ್ತು. ಇನ್ನು 2020ರ ಐಪಿಎಲ್‌ ಹರಾಜಿನಲ್ಲಿ ಪ್ಯಾಟ್‌ ಕಮಿನ್ಸ್‌ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ 15.5 ಕೋಟಿಗೆ ಬಿಕರಿಯಾಗಿದ್ದರು. 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ