Mysore
17
clear sky

Social Media

ಬುಧವಾರ, 24 ಡಿಸೆಂಬರ್ 2025
Light
Dark

ಭಾರತೀಯ ಒಲಂಪಿಕ್​ ಸಂಸ್ಥೆ ಅಧ್ಯಕ್ಷರಾಗಿ ಪಿಟಿ ಉಷಾ ಅವಿರೋಧ ಆಯ್ಕೆ

 ನವದೆಹಲಿ: ಭಾರತೀಯ ಒಲಂಪಿಕ್​ ಸಂಸ್ಥೆಯ ಅಧ್ಯಕ್ಷರಾಗಿ ಮಾಜಿ ಓಟಗಾರ್ತಿ, ಏಷ್ಯನ್​ ಗೇಮ್ಸ್​ ಚಿನ್ನದ ಪದಕ ವಿಜೇತೆ ಪಿಟಿ ಉಷಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಉಷಾ ಅವರನ್ನು ಹೊರತುಪಡಿಸಿ ಯಾರೊಬ್ಬರೂ ಉಮೇದುವಾರಿಕೆ ಸಲ್ಲಿಸದ ಕಾರಣ ವಿರೋಧ ಆಯ್ಕೆ ನಡೆದಿದೆ.

ಒಲಂಪಿಕ್​​ ಸಂಸ್ಥೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಿಟಿ ಉಷಾ ಅವರು ಪಾತ್ರರಾದರು. ಇನ್ನುಳಿದಂತೆ ಉಪಾಧ್ಯಕ್ಷ(ಮಹಿಳೆ), ಜಂಟಿ ಕಾರ್ಯದರ್ಶಿ(ಮಹಿಳೆ) ನಾಲ್ಕು ಕಾರ್ಯಕಾರಿ ಮಂಡಳಿ ಸದಸ್ಯ ಸ್ಥಾನಕ್ಕೆ 12 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಡಿಸೆಂಬರ್​ 10 ರಂದು ಚುನಾವಣೆ ನಡೆಯಲಿದೆ. ಉಷಾ ಅವರು ಭಾನುವಾರ 14 ಬೆಂಬಲಿಗರೊಂದಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!