Mysore
27
few clouds

Social Media

ಶುಕ್ರವಾರ, 17 ಜನವರಿ 2025
Light
Dark

ಕಾಮನ್‌ವೆಲ್ತ್‌ : ಚಿನ್ನದ ಬೇಟೆಯಾಡಿದ ಭಾರತದ ಬಾಕ್ಸರ್ಸ್‌

ಬರ್ಮಿಂಗ್‌ಹ್ಯಾಮ್‌ : ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್‌ಗಳು ಚಿನ್ನದ ಬೇಟೆಯಾಡಿದ್ದಾರೆ. ಮಹಿಳಾ ವಿಭಾಗದಲ್ಲಿ ನೀತೂ ಗಂಗಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರೇ, ದೇಶದ ನಂ.1 ಬಾಕ್ಸಿಂಗ್ ಪಟು ಅಮಿತ್ ಪಂಘಾಲ್ ಚೊಚ್ಚಲ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತದ ಪದಕದ ಬೇಟೆ ಭರ್ಜರಿಯಾಗಿಯೇ ಮುಂದುವರೆದಿದೆ.

21 ವರ್ಷದ ಹರ್ಯಾಣ ಮೂಲದ ಬಾಕ್ಸರ್ ನೀತೂ ಗಂಗಾ, ಮಹಿಳೆಯರ 48 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್‌ನ ಡೇಮಿ ಜೇಡ್ ರೆಸ್ಡಾನ್ ಎದುರು 5-0 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಇನ್ನು ಪುರುಷರ 51 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅಮಿತ್ ಪಂಘಾಲ್ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.  ಇದು ಅಮಿತ್ ಪಂಘಾಲ್ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಗೆದ್ದ ಮೊದಲ ಚಿನ್ನದ ಪದಕ ಎನಿಸಿಕೊಂಡಿದೆ. ಈ ಮೊದಲು ಅಮಿತ್ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಏಕಪಕ್ಷೀಯವಾಗಿ ನಡೆದ ಬಾಕ್ಸಿಂಗ್ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಬಾಕ್ಸರ್‌ ಕೀರನ್ ಮೆಕ್‌ಡೊನಾಲ್ಡ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪಾಲಾದ 15ನೇ ಚಿನ್ನದ ಪದಕ ಎನಿಸಿಕೊಂಡಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ