Mysore
25
overcast clouds
Light
Dark

IND v AUS : ಭಾರತಕ್ಕೆ 4 ರನ್‌ ರೋಚಕ ಜಯ

ಮುಂಬೈ: ರೋಚಕ ಸೂಪರ್‌ ಓವರ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು 4 ರನ್‌ಗಳಿಂದ ಗೆಲ್ಲುವ  ಮೂಲಕ  5 ಪಂದ್ಯಗಳ ಸರಣಿ 1-1 ರಲ್ಲಿ ಸಮವಾಗಿದೆ.

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ1 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತು. 188 ರನ್‌ಗಳ ಗುರಿಯನ್ನು ಪಡೆದ ಭಾರತ 20 ಓವರ್‌ಗಳಲ್ಲಿ 187 ರನ್‌ ಗಳಿಸಿತು. ಪರಿಣಾಮ ಪಂದ್ಯ ಸೂಪರ್‌ ಓವರ್‌ನತ್ತ ತಿರುಗಿತು.

ಸೂಪರ್‌ ಓವರ್‌ ಹೇಗಿತ್ತು?
ಮೊದಲು ಬ್ಯಾಟ್‌ ಮಾಡಿದ ಭಾರತ ಪರ ರಿಚಾ ಘೋಷ್ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರೆ ಎರಡನೇ ಎಸೆತದಲ್ಲಿ ಕ್ಯಾಚ್‌ ನೀಡಿ ಔಟಾದರು. ಹೀದರ್ ಗ್ರಹಾಂ ಅವರ ಮೂರನೇ ಎಸೆತದಲ್ಲಿ ಕೌರ್‌ 1 ರನ್‌ ಓಡಿದರು. ನಂತರ ಮೂರು ಎಸೆತಗಳಲ್ಲಿ ಸ್ಮೃತಿ ಮಂಧಾನ 4, 6, 3 ರನ್‌ ಚಚ್ಚಿದ ಪರಿಣಾಮ ಭಾರತ 20 ರನ್‌ ಗಳಿಸಿತು.

ಭಾರತದ ಪರ ರೇಣುಕಾ ಸಿಂಗ್‌ ಬೌಲಿಂಗ್‌ ದಾಳಿಗೆ ಇಳಿದರು. ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ ಒಂಟಿ ರನ್‌ ಬಂತು. ಮೂರನೇ ಎಸೆತದಲ್ಲಿ ಗಾರ್ಡ್‌ನರ್‌ ಕ್ಯಾಚ್‌ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಒಂದು ರನ್‌ ಬಂದರೆ ಕೊನೆಯ ಎರಡು ಎಸೆತವನ್ನು ಹೀಲಿ ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿದರು. ಅಂತಿಮವಾಗಿ ಆಸ್ಟ್ರೇಲಿಯಾ ಸೂಪರ್‌ ಓವರ್‌ನಲ್ಲಿ 16 ರನ್‌ ಮಾತ್ರ ಗಳಿಸಿತು.

ಪಂದ್ಯ ಟೈ ಆಗಿದ್ದು ಹೇಗೆ?
ಹೀದರ್ ಗ್ರಹಾಂ ಅವರ 19ನೇ ಓವರ್‌ನಲ್ಲಿ ಕೇವಲ 4 ರನ್‌ ಬಂದ ಕಾರಣ ಪಂದ್ಯ ರೋಚಕ ಘಟದತ್ತ ತಿರುಗಿತ್ತು. ಭಾರತಕ್ಕೆ ಕೊನೆಯ ಓವರ್‌ನಲ್ಲಿ 14 ರನ್‌ ಬೇಕಿತ್ತು, ಕ್ರೀಸ್‌ನಲ್ಲಿ ರಿಚಾ ಘೋಷ್‌ ಮತ್ತು ದೇವಿಕಾ ವೈದ್ಯಾ ಇದ್ದರು. ಮೊದಲ ಎಸೆತದಲ್ಲಿ ಘೋಷ್‌ 1 ರನ್‌ ಓಡಿದರೆ ಎರಡನೇ ಎಸೆತವನ್ನು ವೈದ್ಯ ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ 1 ರನ್‌ ಬಂದರೆ 4 ಮತ್ತು ಐದನೇ ಎಸೆತದಲ್ಲಿ ಘೋಷ್‌ 2 ಮತ್ತು 1 ರನ್‌ ಓಡಿದರು. ಕೊನೆಯ ಎಸೆತವನ್ನು ದೇವಿಕಾ ಬೌಂಡರಿಗೆ ಅಟ್ಟಿದ್ದರಿಂದ ಪಂದ್ಯ ಟೈ ಆಯ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ