Mysore
20
overcast clouds
Light
Dark

ICC t20 worldcup: ವೆಸ್ಟ್‌ ಇಂಡೀಸ್‌ ತಂಡ ಪ್ರಕಟ; ಆರ್‌ಸಿಬಿ ಆಟಗಾರನಿಗೆ ಉಪನಾಯಕನ ಪಟ್ಟ?

ವೆಸ್ಟ್‌ಇಂಡೀಸ್‌: ಇದೇ ಜೂನ್‌.2ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರಕಟಿಸಲಾಗಿದೆ. ಹಾಗೂ ಈ ತಂಡಕ್ಕೆ ಅಚ್ಚರಿಯಂಬಂತೆ ನಾಯಕನನ್ನು ಆಯ್ಕೆ ಮಾಡಲಾಗಿದೆ.

ವೆಸ್ಟ್‌ ಇಂಡೀಸ್‌ ಮತ್ತು ಅಮೇರಿಕಾ ಸಹಭಾಗಿತ್ವದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ವೆಸ್ಟ್‌ ಇಂಡೀಸ್‌ ತಂಡವನ್ನು ರೋಮನ್‌ ಪೊವೆಲ್‌ ಮುನ್ನಡೆಸಲಿದ್ದಾರೆ. ಇನ್ನು ಉಪ ನಾಯಕರಾಗಿ ಆರ್‌ಸಿಬಿ ಆಟಗಾರ ಅಲ್ಜಾರಿ ಜೋಸೆಫ್‌ ಅವರು ನೇಮಕಗೊಂಡಿದ್ದಾರೆ.

ಇನ್ನು ಈ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್‌ ಆಲ್‌ರೌಂಡರ್‌ ಜಾಸನ್‌ ಹೋಲ್ಡರ್‌ ಗಾಯದಿಂದಾಗಿ ಅಲಭ್ಯರಾಗಿದ್ದಾರೆ. ಅವರಿಗೆ ಬದಲಿ ಆಟಗಾರರಾಗಿ, ಒಬೆದ್‌ ಮೆಕಾಯ್‌ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಆಂಡ್ರೆ ರಸೆಲ್‌, ಚಾರ್ಲ್ಸ್‌, ಪೂರನ್‌, ಹೆಟ್ಮಾಯರ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡ ಹೀಗಿದೆ: ರೋಮನ್‌ ಪೋವೆಲ್‌(ನಾಯಕ), ಅಲ್ಜಾರಿ ಜೋಸೆಫ್‌(ಉಪ ನಾಯಕ), ಶಾಯ್‌ ಹೋಪ್‌(ವಿ.ಕೀ), ಜಾನ್ಸನ್‌ ಚಾರ್ಲ್ಸ್‌, ರಾಸ್ಟನ್‌ ಚೇಸ್‌, ಬ್ರೆಂಡನ್‌ ಕಿಂಗ್‌, ನಿಕೋಲಸ್‌ ಪೂರನ್‌(ವಿ.ಕೀ), ಶಿಮ್ರಾನ್‌ ಹೆಟ್ಮಾಯರ್‌, ಅಕೀಲ್‌ ಹುಸೇನ್‌, ಶಮರ್‌ ಜೋಸೆಫ್‌, ಒಬೆದ್‌ ಮೆಕಾಯ್‌, ಗುಡಕೇಶ್‌ ಮೋತಿ, ಶೆರ್ಪೆನ್‌ ರುಡರ್‌ಫೋರ್ಡ್‌, ರೊಮ್ಯಾರಿಯೋ ಶೆಫರ್ಡ್‌.