ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಆಷಸ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಭವ ಮೆರೆಯುತ್ತಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್, 5ನೇ ಹಾಗೂ ಅಂತಿಮ ಪಂದ್ಯದಲ್ಲೂ ಸಿಡಿಲಬ್ಬರದ ಬ್ಯಾಟ್ ಮಾಡಿ 91 ರನ್ ಬಾರಿಸಿ ಶತಕ ವಂಚಿತರಾದರೂ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದೀರ್ಘಕಾಲದ ದಾಖಲೆ ಸರಿಗಟ್ಟಿದ್ದಾರೆ.
ಲಂಡನ್ ನಲ್ಲಿರುವ ದಿ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 3 ರನ್ ಗಳಿಗೆ ತಮ್ಮ ಆಟ ಮುಗಿಸಿದ್ದ ಜೋ ರೂಟ್, ದ್ವಿತೀಯ ಇನಿಂಗ್ಸ್ ನಲ್ಲಿ 11 ಮನಮೋಹಕ ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ನೆರವಿನಿಂದ 91 ರನ್ ಬಾರಿಸಿ ಟಾಡ್ ಮಾರ್ಫಿ ಬೌಲಿಂಗ್ ನಲ್ಲಿ ಎಲ್ ಬಿಡ್ಲ್ಯು ಬಲೆಗೆ ಬಿದ್ದು ಶತಕ ವಂಚಿತರಾದರು.
ವಿಕೆಟ್ ಕೀಪರ್ ಜಾನಿ ಬೈರಿಸ್ಟೋವ್ (78 ರನ್, 11 ಬೌಂಡರಿ) ಜೊತೆಗೂಡಿ 5ನೇ ವಿಕೆಟ್ ಗೆ 110 ರನ್ ಜೊತೆಯಾಟ ನೀಡಿ ತಂಡದ ಮೊತ್ತ 300 ಗಡಿ ದಾಟಲು ಸಹಕರಿಸಿದ್ದ ಜೋ ರೂಟ್ ತಮ್ಮ ಟೆಸ್ಟ್ ಜೀವನದಲ್ಲಿ 19 ಸರಣಿಗಳಲ್ಲಿ 300 ಹಾಗೂ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆ ಸರಿದೂಗಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ಬಾರಿ 300+ ಹೆಚ್ಚು ರನ್ ಗಳಿಸಿದ ಆಟಗಾರರು
*19 ಬಾರಿ -ಜೋ ರೂಟ್- ಇಂಗ್ಲೆಂಡ್
*19 ಬಾರಿ -ಸಚಿನ್ ತೆಂಡೂಲ್ಕರ್- ಭಾರತ
*18 ಬಾರಿ -ರಾಹುಲ್ ದ್ರಾವಿಡ್- ಭಾರತ
*18 ಬಾರಿ- ಬ್ರಯಾನ್ ಲಾರಾ- ವೆಸ್ಟ್ ಇಂಡೀಸ್
*17 ಬಾರಿ- ರಿಕಿ ಪಾಂಟಿಂಗ್- ಆಸ್ಟ್ರೇಲಿಯಾ
*17 ಬಾರಿ- ಅಲಸ್ಟ್ರೈರ್ ಕುಕ್- ಇಂಗ್ಲೆಂಡ್
*19 ಬಾರಿ -ಜೋ ರೂಟ್- ಇಂಗ್ಲೆಂಡ್
*19 ಬಾರಿ -ಸಚಿನ್ ತೆಂಡೂಲ್ಕರ್- ಭಾರತ
*18 ಬಾರಿ -ರಾಹುಲ್ ದ್ರಾವಿಡ್- ಭಾರತ
*18 ಬಾರಿ- ಬ್ರಯಾನ್ ಲಾರಾ- ವೆಸ್ಟ್ ಇಂಡೀಸ್
*17 ಬಾರಿ- ರಿಕಿ ಪಾಂಟಿಂಗ್- ಆಸ್ಟ್ರೇಲಿಯಾ
*17 ಬಾರಿ- ಅಲಸ್ಟ್ರೈರ್ ಕುಕ್- ಇಂಗ್ಲೆಂಡ್
ಇಂಗ್ಲೆಂಡ್ ನ ಮಾಜಿ ನಾಯಕ ಜೋ ರೂಟ್, 2024 ರ ಜನವರಿಯಲ್ಲಿ ಭಾರತ ಪ್ರವಾಸದಲ್ಲಿ ಟೀಮ್ ಇಂಡಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ದಾಖಲೆ ಮುರಿಯುವ ಅವಕಾಶವಿದೆ. 2023ನೇ ಸಾಲಿನ ಆಷಸ್ ಟೆಸ್ಟ್ ಸರಣಿಯಲ್ಲಿ 9 ಇನಿಂಗ್ಸ್ ನಿಂದ 51.50 ಸರಾಸರಿಯಲ್ಲಿ ಒಂದು ಶತಕ, ಒಂದು ಅರ್ಧಶತಕ ನೆರವಿನಿಂದ ಜೋ ರೂಟ್ 412 ರನ್ ಬಾರಿಸಿದ್ದಾರೆ.
ಪಂದ್ಯ ಗೆಲ್ಲುವ ಒತ್ತಡದಲ್ಲಿ ಇಂಗ್ಲೆಂಡ್
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಆಷಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-2 ರಿಂದ ಹಿನ್ನಡೆ ಅನುಭವಿಸಿ ದಶಕದ ನಂತರ ತವರು ಅಂಗಳದಲ್ಲಿ ಆಷಸ್ ಟೆಸ್ಟ್ ಸರಣಿ ಕಳೆದುಕೊಳ್ಳುವ ಒತ್ತಡಕ್ಕೆ ಸಿಲುಕಿದೆ. ಲಂಡನ್ ನ ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ 377 ರನ್ ಮುನ್ನಡೆ ಸಾಧಿಸಿದ್ದು, ಅಂತರವನ್ನು 400 ರನ್ ಗಳಿಗೇರಿಸಿ ಆಸ್ಟ್ರೆಲಿಯಾ ಮೇಲೆ ಒತ್ತಡ ಹೇರಿ ಪಂದ್ಯ ಜಯಿಸುವ ಮೂಲಕ ಸರಣಿಯನ್ನು 2-2 ರಿಂದ ಸಮಬಲಗೊಳಿಸಲು ಬೆನ್ ಸ್ಟೋಕ್ಸ್ ಪಡೆ ಹೋರಾಟ ನಡೆಸಲು ರಣತಂತ್ರ ರೂಪಿಸಲಿದೆ.