ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಹಲಸೂರಿನಲ್ಲಿ ನೂತನ ರೆಸಿಡೆನ್ಶಿಯಲ್ ಅಕಾಡೆಮಿಯನ್ನು ಆರಂಭಿಸುತ್ತಿದೆ. ಈ ರೆಸಿಡೆನ್ಶಿಯಲ್ ಅಕಾಡೆಮಿಗಾಗಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮುಂಬರುವ ಓಪನ್ ಟ್ರಯಲ್ಸ್ ಘೋಷಿಸುತ್ತಿದ್ದು, ಬೆಂಗಳೂರಿನ ಹಲಸೂರಿನಲ್ಲಿರುವ ತನ್ನ ಕ್ಲಬ್ ನಲ್ಲಿ ಈ ಓಪನ್ ಟ್ರಯಲ್ಸ್ ನಡೆಯಲಿದೆ.
SUFCಯ ಮುಂಬರುವ ರೆಸಿಡೆನ್ಶಿಯಲ್ ಅಕಾಡೆಮಿಗೆ ಆಟಗಾರರನ್ನು ಆಯ್ಕೆ ಮಾಡುವುದು ಈ ಟ್ರಯಲ್ಸ್ ಮುಖ್ಯ ಉದ್ದೇಶವಾಗಿದೆ.ಯುವ ಫುಟ್ಬಾಲ್ ಆಟಗಾರರಿಗೆ ಉತ್ತಮ ತರಬೇತಿ ಮತ್ತು ಮಾರ್ಗದರ್ಶನವನ್ನು ಒದಗಿಸುವುದು ಈ ಅಕಾಡೆಮಿಯ ಉದ್ದೇಶವಾಗಿದೆ. ಈ ಅಕಾಡೆಮಿಯು ಮೈದಾನದ ಒಳಗೆ ಮತ್ತು ಹೊರಗೆ ಆಟಗಾರರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೇ ಆಧುನಿಕ ಸೌಲಭ್ಯಗಳು, ಪರಿಣಿತ ಕೋಚಿಂಗ್, ಮತ್ತು ವೃತ್ತಿಪರ ಫುಟ್ಬಾಲ್ ಗೆ ಮಾರ್ಗವನ್ನು ಒದಗಿಸುತ್ತದೆ. ಆಧುನಿಕ ಸೌಲಭ್ಯಗಳು ಮತ್ತು ಪರಿಣಿತ ತರಬೇತಿಯೊಂದಿಗೆ ಸುಸಜ್ಜಿತವಾದ SUFC ರೆಸಿಡೆನ್ಶಿಯಲ್ ಅಕಾಡೆಮಿ ಆಟಗಾರರನ್ನು ಕೇವಲ ಉತ್ತಮ ಫುಟ್ಬಾಲರ್ಗಳಾಗಿ ಮಾತ್ರವಲ್ಲ, ವೃತ್ತಿಪರ ಜೀವನಕ್ಕೆ ಸಿದ್ಧರಾಗುವ ಪರಿಪೂರ್ಣ ವ್ಯಕ್ತಿಗಳಾಗಿಯೂ ರೂಪಿಸಲು ಕಾರ್ಯ ನಿರ್ವಹಿಸುತ್ತದೆ. ಸ್ಪರ್ಧಾತ್ಮಕ ದರಗಳಲ್ಲಿ, ಆಟಗಾರರಿಗೆ ವೃತ್ತಿಪರ ಪಥವನ್ನು ರೂಪಿಸುವ ಅವಕಾಶವನ್ನು ಅಕಾಡೆಮಿ ನೀಡಲಿದೆ.
ಪ್ರತಿಭಾವಂತ ಆಟಗಾರರನ್ನು ಹುಡುಕಲು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಅನೇಕ ರಾಜ್ಯಗಳಲ್ಲಿ ಓಪನ್ ಟ್ರಯಲ್ಸ್ ಆಯೋಜಿಸುತ್ತಿದೆ. ಫೆಬ್ರವರಿ 15 ರಂದು ಬೆಂಗಳೂರಿನ ಹಲಸೂರಿನಲ್ಲಿರುವ SUFC ಯಲ್ಲಿ ಪ್ರಥಮ ಓಪನ್ ಟ್ರಯಲ್ಸ್ ನಡೆಯಲಿದ್ದು ಬಳಿಕ ಮಾರ್ಚ್ 1 ಮತ್ತು 2 ರಂದು ಪುಣೆಯ ಬವ್ಧಾನ್ ಮತ್ತು ಖರಾಡಿಯಲ್ಲಿ ಟ್ರಯಲ್ಸ್ ನಡೆಯಲಿವೆ. 11 ರಿಂದ 18 ವರ್ಷ ವಯಸ್ಸಿನ ಎಲ್ಲ ಯುವ ಫುಟ್ಬಾಲ್ ಆಟಗಾರರು ಓಪನ್ ಟ್ರಯಲ್ಸ್ ನಲ್ಲಿ ಭಾಗವಹಿಸಬಹುದಾಗಿದೆ. ಈ ಟ್ರಯಲ್ಸ್ ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ SUFC ಅಕಾಡಮಿಯಲ್ಲಿ ಸ್ಥಾನ ಪಡೆಯಬಹುದಾಗಿದೆ.
ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ನ CEO ಮೊಹಮದ್ ರಫಿಕ್ ಯುವ ಫುಟ್ಬಾಲ್ ಆಟಗಾರರಿಗೆ ಟ್ರಯಲ್ಸ್ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ್ದಾರೆ. ‘ ಎಲ್ಲ ಅರ್ಹ ಫುಟ್ಬಾಲ್ ಆಟಗಾರರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಅಕಾಡೆಮಿಯ ಭಾಗವಾಗಲು ಈ ಟ್ರಯಲ್ಸ್ ಅನ್ನು ಆಯೋಜಿಸಲಾಗಿದೆ. ಈ ಟ್ರಯಲ್ಸ್ ಯುವ ಆಟಗಾರರಿಗೆ ಅತ್ಯಾಧುನಿಕ ಸೌಲಭ್ಯದಲ್ಲಿ ವೃತ್ತಿಪರ ತರಬೇತಿ ಪಡೆಯುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಫುಟ್ಬಾಲ್ ವೃತ್ತಿಜೀವನದತ್ತ ಮೊದಲ ಹೆಜ್ಜೆ ಇಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ’ ಎಂದಿದ್ದಾರೆ.
SUFC ರೆಸಿಡೆನ್ಶಿಯಲ್ ಅಕಾಡೆಮಿ ಟ್ರಯಲ್ಸ್ ಗಳಿಗೆ ನೋಂದಾಯಿಸಲು, SUFC ವೆಬ್ಸೈಟ್ಗೆ ಭೇಟಿ ನೀಡಬಹುದು
SUFC ರೆಸಿಡೆನ್ಶಿಯಲ್ ಅಕಾಡೆಮಿಯು ಭವಿಷ್ಯದ ಫುಟ್ಬಾಲ್ ಆಟಗಾರರಿಗೆ ತಳಮಟ್ಟದ ತರಬೇತಿ ಮತ್ತು ವೃತ್ತಿಪರ ಅಭಿವೃದ್ಧಿಯ ನಡುವಿನ ಅಂತರವನ್ನು ಕಡಿಮೆ ಮಾಡಲು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಅಕಾಡೆಮಿಯು FIFA ಸ್ಟ್ಯಾಂಡರ್ಡ್ ಸೌಲಭ್ಯ, ವಿಶ್ವದರ್ಜೆಯ ಪಠ್ಯಕ್ರಮ, ಸ್ಥಾನ-ನಿರ್ದಿಷ್ಟ ವಿಶ್ಲೇಷಣೆ, ಪರವಾನಗಿ ಪಡೆದ ಕೋಚ್ ಗಳೊಂದಿಗೆ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ತರಬೇತಿ ಕೂಡ ನೀಡುತ್ತದೆ.
SUFC ರೆಸಿಡೆನ್ಶಿಯಲ್ ಅಕಾಡೆಮಿಯು ಕೇವಲ ಫುಟ್ಬಾಲ್ ತರಬೇತಿ ಮಾತ್ರವಲ್ಲದೆ, ಆಟಗಾರರರ ಸಮಗ್ರ ಅಭಿವೃದ್ಧಿಯತ್ತ ಕೂಡ ಒತ್ತು ನೀಡಲಿದೆ. ಜೀವನ ಕೌಶಲ್ಯ ತರಬೇತಿ,ಜಿಮ್ , ಭಾವನಾತ್ಮಕ ಅಭಿವೃದ್ಧಿ, ವೈಯಕ್ತಿಕ ಪೌಷ್ಠಿಕತೆ, ಮತ್ತು ವೃತ್ತಿ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಗೆ ಉತ್ತಮ ವೇದಿಕೆ ಒದಗಿಸುತ್ತಿದೆ. SUFC ರೆಸಿಡೆನ್ಶಿಯಲ್ ಅಕಾಡೆಮಿ ಮಾನ್ಯತೆ ಪಡೆದ ಶಿಕ್ಷಣ ಪಠ್ಯಕ್ರಮವನ್ನು ಅನುಸರಿಸಲಿದ್ದು, ಅಥ್ಲೆಟಿಕ್ ತರಬೇತಿಯೊಂದಿಗೆ ಶೈಕ್ಷಣಿಕ ಶಿಕ್ಷಣದ ಕಡೆಗೂ ಕೂಡ ಆದ್ಯತೆ ನೀಡುತ್ತದೆ. ಅಕಾಡೆಮಿಯು ಉತ್ತಮ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾದ ಕ್ಯಾಂಪಸ್ ಅನ್ನು ಹೊಂದಿದ್ದು, ಜಿಮ್, ಫಿಜಿಯೊಥೆರಪಿ ಕೇಂದ್ರ, ವಿಡಿಯೋ ಅನಾಲಿಸಿಸ್ ರೂಮ್ಗಳು, ಹಾಗೂ ಆರಾಮದಾಯಕ ವಾಸಸ್ಥಾನಗಳನ್ನು ಒಳಗೊಂಡಿದೆ. ತನ್ನದೇ ಆದ ಸುರಕ್ಷಿತ ಮತ್ತು ಸುಸಜ್ಜಿತ ಕ್ಯಾಂಪಸ್ನಲ್ಲಿ ನೆಲೆಗೊಂಡಿರುವ ಅಕಾಡೆಮಿಯು ಆಟಗಾರರ ಆರೋಗ್ಯ ಮತ್ತು ಮನರಂಜನೆಗೆ ಅಗತ್ಯವಿರುವ PUMA ಇಂಡಿಯಾ, Maverick & Farmer, Cult.Fit, Tagda Raho ಮತ್ತು ಹೆಚ್ಚಿನ ಬ್ರ್ಯಾಂಡ್ಗಳನ್ನು ಒಳಗೊಂಡಿದೆ.
2012ರಿಂದ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ 13,000 ಕ್ಕೂ ಹೆಚ್ಚು ಫುಟ್ಬಾಲ್ ಆಟಗಾರರಿಗೆ ತರಬೇತಿ ನೀಡಿದೆ. BDFA A ಡಿವಿಷನ್ ಚಾಂಪಿಯನ್ಶಿಪ್, BDFA ಸೂಪರ್ ಡಿವಿಷನ್ನಲ್ಲಿ ನಾಲ್ಕು ಬಾರಿ ಟಾಪ್-2 ಸ್ಥಾನವನ್ನು ಪಡೆದಿದ್ದು, 2ನೇ ಡಿವಿಷನ್ I-ಲೀಗ್ನಲ್ಲಿ ಭಾಗವಹಿಸಿದೆ. SUFCಯು Under-13, Under-15, ಮತ್ತು Under-17 ವಿಭಾಗಗಳಲ್ಲಿ ಮೂರು ಎಲೈಟ್ ಯುವ ತಂಡಗಳನ್ನು ಹೊಂದಿದ್ದು, ಜೊತೆಗೆ ಹಿರಿಯ ಪುರುಷರ ತಂಡವನ್ನೂ ಕೂಡ ಹೊಂದಿದೆ. ಭಾರತದಲ್ಲಿ ಸುಸ್ಥಿರ ಫುಟ್ಬಾಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ರೆಸಿಡೆನ್ಶಿಯಲ್ ಅಕಾಡೆಮಿಯ ಮಹತ್ವದ ಹೆಜ್ಜೆಯಾಗಿದೆ. ಇಲ್ಲಿ ಆಟಗಾರರು, ತರಬೇತುದಾರರು ಮತ್ತು ವೃತ್ತಿಪರರು ಕ್ರೀಡೆಯಲ್ಲಿ ಅಭಿವೃದ್ಧಿ ಹೊಂದಬಹುದು ಮತ್ತು ಉತ್ತಮ ಸಾಧನೆ ಮಾಡಬಹುದಾಗಿದೆ.
SUFC ರೆಸಿಡೆನ್ಶಿಯಲ್ ಅಕಾಡೆಮಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 82962 81556ನ್ನು ಸಂಪರ್ಕಿಸಬಹುದು.