ಹರಾರೆ: ಅಮೆರಿಕದ ವೇಗದ ಬೌಲರ್ ಕೈಲ್ ಫಿಲಿಪ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೌಲಿಂಗ್ ನಿಂದ ಅಮಾನತು ಮಾಡಲಾಗಿದೆ.
ಹರಾರೆಯಲ್ಲಿ ನಡೆದ ವಿಶ್ವ ಕಪ್ ಅರ್ಹತಾ ಕೂಟದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ 26 ವರ್ಷದ ಫಿಲಿಪ್ ಸಂಶಯಾಸ್ಪದ ಶೈಲಿಯ ಬೌಲಿಂಗ್ ಮಾಡಿದ್ದು ಬೆಳಕಿಗೆ ಬಂದಿತ್ತು. ಆ ಪಂದ್ಯದಲ್ಲಿ ಫಿಲಿಪ್ 56 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.
ಯುಎಸ್ ಕ್ಯಾಂಪ್ ನ ಬಹುಪಾಲು ಆಟಗಾರರು ಅಸ್ವಸ್ಥರಾಗಿದ್ದಾರೆ. ಏಕಾಏಕಿ ಜ್ವರದಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲೇ ಫಿಲಿಪ್ ಅವರನ್ನು ಅಮಾನತು ಮಾಡಲಾಗಿದೆ.
ಫಿಲಿಪ್ ಅವರು ನೇಪಾಳದ ವಿರುದ್ಧ ಯುಎಸ್ಎ ನ ಎರಡನೇ ಪಂದ್ಯದಲ್ಲಿ ಆಡಿದ್ದರು. ಐಸಿಸಿ ಈವೆಂಟ್ ಪ್ಯಾನೆಲ್ ಅವರ ಬೌಲಿಂಗ್ ಕ್ರಮವನ್ನು ನಿಯಮಾವಳಿಗಳ 6.7 ರ ಪ್ರಕಾರ ಕಾನೂನು ಬಾಹಿರವೆಂದು ಪರಿಗಣಿಸಿತು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಿಂದ ಫಿಲಿಪ್ ಅವರ ಅಮಾನತು ಐಸಿಸಿಯ ಪರಿಣಿತ ಸಮಿತಿ ಅಥವಾ ಐಸಿಸಿ ಅನುಮೋದಿತ ಪರೀಕ್ಷಾ ಕೇಂದ್ರದಿಂದ ಅವರ ಕ್ರಮವನ್ನು ಪರಿಶೀಲಿಸುವವರೆಗೆ ಹಾಗೇ ಇರುತ್ತದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಿಂದ ಫಿಲಿಪ್ ಅವರ ಅಮಾನತು ಐಸಿಸಿಯ ಪರಿಣಿತ ಸಮಿತಿ ಅಥವಾ ಐಸಿಸಿ ಅನುಮೋದಿತ ಪರೀಕ್ಷಾ ಕೇಂದ್ರದಿಂದ ಅವರ ಕ್ರಮವನ್ನು ಪರಿಶೀಲಿಸುವವರೆಗೆ ಹಾಗೇ ಇರುತ್ತದೆ.