Mysore
27
scattered clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಭಾರತ vs ಆಸ್ಟ್ರೇಲಿಯಾ ಕೊನೆಯ ಟೆಸ್ಟ್:‌ ಆಡುವ ಬಳಗ ಪ್ರಕಟಿಸಿದ ಆಸ್ಟ್ರೇಲಿಯಾ

ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಬಾರ್ಡರ್-ಗವಸ್ಕಾರ್‌ ಟ್ರೋಫಿಯ 5ನೇ ಹಾಗೂ ಕೊನೆಯ ಪಂದ್ಯವು ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಾಳೆಯಿಂದ (ಜನವರಿ 3) ನಡೆಯಲಿದ್ದು, ಆಸ್ಟ್ರೇಲಿಯಾ ತಂಡ ಮಹತ್ವದ ಬದಲಾವಣೆಯೊಂದಿಗೆ ಆಡುವ 11ರ ಬಳಗ ಪ್ರಕಟಿಸಿದೆ.

ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಅವರನ್ನು ಈ ಪಂದ್ಯದಿಂದ ಕೈಬಿಟ್ಟಿದ್ದು ಆ ಸ್ಥಾನಕ್ಕೆ ಬ್ಯೂ ವೆಬ್‌ ಸ್ಟಾರ್‌ನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕಳೆದ ನಾಲ್ಕು ಪಂದ್ಯಗಳಿಂದ ಆಸೀಸ್‌ ತಂಡದಲ್ಲಿ ಆಡಿದ್ದ ಮಿಚೆಲ್‌ ಮಾರ್ಷ್‌ ಫಾರ್ಮ್‌ ಕೊರತೆ ಎದುರಿಸುತ್ತಿದ್ದು, 4 ಟೆಸ್ಟ್‌ ಪಂದ್ಯಗಳಿಂದ 10.42ರ ಸರಾಸರಿಯಲ್ಲಿ ಕೇವಲ 72 ರನ್‌ ಮಾತ್ರ ಕಲೆಹಾಕಿದ್ದಾರೆ. ಫಿಟ್‌ನೆಸ್‌ ಸಮಸ್ಯೆಯ ಕಾರಣದಿಂದಾಗಿ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ ಎಂದು ನಾಯಕ ಪ್ಯಾಟ್‌ ಕಮಿನ್ಸ್‌ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ಲೇಯಿಂಗ್‌ ಇಲವೆನ್‌: ಉಸ್ಮಾನ್‌ ಖ್ವಾಜಾ, ಸ್ಯಾಮ್‌ ಕೊನ್‌ಸ್ಟಾಸ್‌, ಮಾರ್ನಸ್‌ ಲಾಬುಶೇನ್‌, ಸ್ಟೀವ್‌ ಸ್ಮಿತ್‌, ಟ್ರಾವಿಸ್‌ ಹೆಡ್‌, ಬ್ಯೂ ವೆಬ್‌ಸ್ಟಾರ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ ಕೀಪರ್‌), ಪ್ಯಾಟ್‌ ಕಮಿನ್ಸ್‌ (ನಾಯಕ), ಮಿಚೆಲ್‌ ಸ್ಟಾರ್ಕ್‌, ನಾಥನ್‌ ಲಿಯಾನ್‌, ಸ್ಕಾಟ್‌ ಬೋಲ್ಯಾಂಡ್‌.

ಪಿಂಕ್‌ ಟೆಸ್ಟ್‌ ಎಂದು ಹೆಸರೇಕೆ?
ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆಡುವ ಮೊದಲ ಪಂದ್ಯಕ್ಕೆ ಪಿಂಕ್‌ ಟೆಸ್ಟ್‌ ಎಂದು ಕರೆಯಲಾಗುತ್ತದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರರು ಪಿಂಕ್‌ ಕ್ಯಾಪ್‌ ಧರಿಸಿ ಆಡುತ್ತಾರೆ. ಇದರ ಉದ್ಧೇಶ ಸ್ತನ ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಅದರ ವಿರುದ್ಧ ಹೋರಾಡುತ್ತಿರುವವರಿಗೆ ಧೈರ್ಯ ತುಂಬುವುದು.

ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್‌ ಮೆಕ್‌ ಗ್ರಾತ್‌ ಅವರ ಪತ್ನಿ ಜೇನ್‌ ಮೆಕ್‌ಗ್ರಾತ್‌ ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಾರೆ. ಅವರ ನೆನಪಿಗಾಗಿ ಮೆಕ್‌ಗ್ರಾತ್‌ ಫೌಂಡೇಶನ್‌ ಸ್ಥಾಪಿಸಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆ ನೆರವು ನೀಡುತ್ತಾ ಬರುತ್ತಿದ್ದಾರೆ.

Tags: