ಬೆಂಗಳೂರು: ಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ೧೧ ರನ್ ಅಂತರದಲ್ಲಿ ಜಯ ಗಳಿಸಿದ ಗುಲ್ಬರ್ಗ ಮಿಸ್ಟಿಕ್ಸ್ ಪ್ರತಿಷ್ಠಿತ ಮಹಾರಾಜ ಟ್ರೋಫಿ ಟಿ-೨೦ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ವಿಜೇತ ಗುಲ್ಬರ್ಗ ತಂಡ ೨೫ ಲಕ್ಷ ರೂ, ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
೨೨೧ ರನ್‌ಗಳ ಬೃಹತ್ ಮೊತ್ತವನ್ನು ಬೆಂಬತ್ತಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಚೇತನ್ ಎಲ್.ಆರ್. (೯೧) ಹಾಗೂ ಕ್ರಾಂತಿ ಕುಮಾರ್ (೪೭) ಅವರ ೧೧೬ ರನ್ ಜೊತೆಯಾಟದಿಂದ ಗೆಲ್ಲು ಆತ್ಮವಿಶ್ವಾಸ ಹೊಂದಿತ್ತು, ಆದರೆ ಮನೋಜ್ ಭಾಂಡಗೆ ಬೆಂಗಳೂರಿನ ಕನಸನ್ನು ನುಚ್ಚುನೂರು ಮಾಡಿದರು. ಅಂತಿಮವಾಗಿ ಬೆಂಗಳೂರು ೯ ವಿಕೆಟ್ ನಷ್ಟಕ್ಕೆ ೨೦೯ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮನೋಜ ಭಾಂಡಗೆ ೩೨ ರನ್‌ಗೆ ೩ ವಿಕೆಟ್ ಗಳಿಸಿ ಪಂದ್ಯಕ್ಕೆ ತಿರುವು ನೀಡಿದರು.
ಬೆಂಗಳೂರು ಬ್ಲಾಸ್ಟರ್ಸ್‌ಗೆ ೨೨೧ ರನ್ ಗುರಿ: ದೇವದತ್ತ ಪಡಿಕ್ಕಲ್ (೫೬*) ಹಾಗೂ ನಾಯಕ ಮನೀಶ್ ಪಾಂಡೆ (೪೧*) ಅವರ ಸ್ಛೋಟಕ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಮಹಾರಾಜ ಟ್ರೋಫಿ ಫೈನಲ್ ಪಂದ್ಯದಲ್ಲಿ ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್‌ಗೆ ೨೨೧ ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಬ್ಲಾಸ್ಟರ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಆಡಿದ ಪ್ರತಿೊಂಬ್ಬ ಬ್ಯಾಟ್ಸ್‌ಮನ್ ತನ್ನಿಂದಾದ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವುದು ಗುಲ್ಬರ್ಗದ ಹೆಮ್ಮೆಯ ಸಂಗತಿ. ರೋಹನ್ ಪಾಟೀಲ್ (೩೮) ಹಾಗೂ ಜೆಸ್ವತ್ ಆಚಾರ್ಯ (೩೯) ೬೦ ರನ್‌ಗಳ ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ವೇದಿಕೆ ಹಾಕಿಕೊಟ್ಟರು. ಟೂರ್ನಿಯಲ್ಲಿ ಇದುವರೆಗೂ ಎರಡು ಶತಕ ದಾಖಲಿಸಿರುವ ರೋಹನ್ ಪಾಟೀಲ್ ಅಬ್ಬರದ ಆರಂಭ ನೀಡಿದರು. ೨೧ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೧ ಸಿಕ್ಸರ್ ಸಿಡಿಸಿ ಅಮೂಲ್ಯ ೩೮ ರನ್ ಗಳಿಸಿ ನಿರ್ಗಮಿಸಿದರು. ಜೆಸ್ವತ್ ಆಚಾರ್ಯ ೩ ಬೌಂಡರಿ ಹಾಗೂ ೩ ಸಿಕ್ಸರ್ ನೆರವಿನಿಂದ ೩೯ ರನ್ ಸಿಡಿಸಿ ಬೃಹತ್ ಮೊತ್ತಕ್ಕೆ ಮುನ್ನುಡಿ ಬರೆದರು.
ಎರಡನೇ ಕ್ವಾಲಿಫಯರ್‌ನಲ್ಲಿ ೯೬ ರನ್ ಸಿಡಿಸಿ ಜಯದ ರೂವಾರಿ ಎನಿಸಿದ್ದ ದೇವದತ್ತ ಪಡಿಕ್ಕಲ್ ಆರಂಭದಲ್ಲಿ ನಿದಾಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದರೂ ನಂತರದ ಅಬ್ಬರದ ಹೊಡೆಗಳಿಗೆ ಮನ ಮಾಡಿ ೪೨ ಎಸೆತಗಳಲ್ಲಿ ೫ ಬೌಂಡರಿ ಹಾಗೂ ೧ ಸಿಕ್ಸರ್ ನೆರವಿನಿಂದ ಅಜೇಯ ೫೬ ರನ್ ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು. ನಾಯಕ ಮನೀಶ್ ಪಾಂಡೆ ಕೇವಲ ೧೭ ಎಸೆತಗಳಲ್ಲಿ ೨ ಬೌಂಡರಿ ಹಾಗೂ ೪ ಸಿಕ್ಸರ್ ನೆರವಿನಿಂದ ಅಜೇಯ ೪೧ ರನ್ ಸಿಡಿಸಿ ನಾಯಕನ ಜವಾಬ್ದಾರಿಯ ಆಟವಾಡಿದರು. ಪಡಿಕ್ಕಲ್ ಹಾಗೂ ಪಾಂಡೆ ೬೨ ರನ್ ಜೊತೆಯಾಟವಾಡಿ ಅಸಾಧಾರಣ ಮೊತ್ತವನ್ನು ದಾಖಲಿಸಿದರು. ಇದಕ್ಕೂ ಮುನ್ನ ಯುವ ಆಟಗಾರ ಕೃಷ್ಣನ್ ಶ್ರೀಜಿತ್ ೨೫ ಎಸತೆಗಳಲ್ಲಿ ೩೮ ರನ್ ಗಳಿಸಿ ತಂಡದ ಪರ ಜವಾಬ್ದಾರಿಯುತ ಆಟವಾಡಿದರು.
ಬೆಂಗಳೂರು ಬ್ಲಾಸ್ಟರ್ಸ್ ಪರ ಅನಿರುಧ್ ಜೋಶಿ ೩ ಓವರ್‌ಗಲ್ಲಿ ಕೇವಲ ೧೫ ರನ್ ನೀಡಿ ೧ ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿದರು.
ಸಂಕ್ಷಿಪ್ತ ಸ್ಕೋರ್:
ಗುಲ್ಬರ್ಗ ಮಿಸ್ಟಿಕ್ಸ್: ೨೦ ಓವರ್‌ಗಳಲ್ಲಿ ೩ ವಿಕೆಟ್‌ಗೆ ೨೨೦ ( ರೋಹನ್ ಪಾಟೀಲ್ ೩೮, ಜೆಸ್ವತ್ ಆಚಾರ್ಯ ೩೯, ಕೃಷ್ಣನ್ ಶ್ರೀಜಿತ್ ೩೮, ದೇವದತ್ತ ಪಡಿಕ್ಕಲ್ ೫೬*, ಮನೀಶ್ ಪಾಂಡೆ ೪೧* ಪ್ರದೀಪ್ ೫೧ಕ್ಕೆ ೧, ರಿಶಿ ಬೋಪಣ್ಣ ೩೫ಕ್ಕೆ ೧, ಅನಿರುಧ್ ಜೋಶಿ ೧೫ಕ್ಕೆ ೧)
ಬೆಂಗಳೂರು ಬ್ಲಾಸ್ಟರ್ಸ್: ೨೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೨೦೯ (ಎಲ್.ಆರ್. ಚೇತನ್ ೯೧, ಕ್ರಾಂತಿ ಕುಮಾರ್ ೪೭, ರಿತೇಶ್ ಭಟ್ಕಳ್ ೨೦ಕ್ಕೆ ೨, ಪ್ರಣವ್ ಭಾಟಿಯಾ ೩೯ಕ್ಕೆ ೨, ಮನೋಜ್ ಭಾಂಡಗೆ ೩೨ಕ್ಕೆ ೩)