ನವದೆಹಲಿ : ರಾಷ್ಟ್ರರಾಜಧಾನಿಯ ಬಿ ಮತ್ತು ಸಿ ಗ್ರೂಪ್‍ನ ನೌಕರರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೀಪಾವಳಿ ಉಡುಗೊರೆ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೀಪಾವಳಿಗೆ ಮುನ್ನ ದಿಲ್ಲಿ ಸರಕಾರದ ಎಲ್ಲಾ ಗ್ರೂಪ್ ಬಿ ಗೆಜೆಟೆಡ್ ಮತ್ತು ಗ್ರೂಪ್ ಸಿ ನೌಕರರಿಗೆ 7,000 ಬೋನಸ್ ನೀಡಲಾಗುತ್ತಿದೆ ಎಂದು ಘೋಷಿಸಿದ್ದಾರೆ.
80,000 ಗ್ರೂಪ್ ಬಿ ಮತ್ತು ಗ್ರೂಪ್ ಸಿ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡಲು ದೆಹಲಿ ಸರ್ಕಾರ 56 ಕೋಟಿ ಮಂಜೂರು ಮಾಡಿದೆ ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಮ್ಮ ಸರ್ಕಾರವು ತನ್ನ ನೌಕರರ ಜೀವನವನ್ನು ಉತ್ತಮಗೊಳಿಸಲು ಯಾವಾಗಲೂ ಪ್ರಯತ್ನಿಸುತ್ತಿದೆ ಮತ್ತು ಅಂತಹ ಪ್ರಯತ್ನಗಳು ಭವಿಷ್ಯದಲ್ಲಿ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.