Mysore
23
overcast clouds

Social Media

ಸೋಮವಾರ, 31 ಆಗಸ್ಟ್ 2026
Light
Dark

ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಸಂಭ್ರಮ

ಕಾರ್ಗಿಲ್ (ಜಮ್ಮು ಕಾಶ್ಮೀರ): ಪ್ರತಿ ವರ್ಷ ಯೋಧರ ಜೊತೆ ಗಡಿ ಭಾಗದಲ್ಲಿ ದೀಪಾವಳಿ ಹಬ್ಬ ಆಚರಿಸುವ ಪ್ರಧಾನಿ ಮೋದಿ, ಈ ಬಾರಿ ಜಮ್ಮು ಕಾಶ್ಮೀರದ ಕಾರ್ಗಿಲ್‌ ಗಡಿಯಲ್ಲಿ ಭಾರತೀಯ ಯೋಧರ ಜೊತೆ ಚ ಆಚರಿಸಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಸೇನೆಗೆ ಮಹಿಳೆಯರನ್ನು ಸೇರ್ಪಡೆ ಮಾಡಿಕೊಂಡ ಬಳಿಕ ಸೇನೆಯ ಬಲವರ್ಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಗಿಲ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದರು. ಮೇಜರ್ ಅಮಿತ್ ಎಂಬುವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಶುಭ ಕೋರಿದರು. ಗುಜರಾತ್‌ನ ಬಾಲಾಚಾಡಿಯಲ್ಲಿ ಇರುವ ಸೈನಿಕ ಶಾಲೆಯಲ್ಲಿ ಅಮಿತ್ ಅವರು ವಿದ್ಯಾರ್ಥಿಯಾಗಿದ್ದ ವೇಳೆ 2001ರಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ್ದರು. ಇದೀಗ 21 ವರ್ಷಗಳ ಬಳಿಕ ಇದೇ ಅಮಿತ್ ಭಾರತೀಯ ಸೇನೆಯ ಮೇಜರ್ ಆಗಿ ಪ್ರಧಾನಿ ಮೋದಿ ಅವರ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!