Mysore
28
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಗರ ನಕ್ಸಲರನ್ನು ಗುರುತಿಸಿ ಬಯಲಿಗೆಳೆಯಬೇಕಿದೆ: ಮೋದಿ

ಏಕತಾನಗರ(ಗುಜರಾತ್): ದೇಶವು ಅಭಿವೃದ್ದಿಯಾಗುವುದನ್ನು ಸಹಿಸದ ಕೆಲವು ಬಾಹ್ಯ ಹಾಗೂ ಆಂತರಿಕ ಶಕ್ತಿಗಳು, ಪ್ರಪಂಚದಾದ್ಯಂತ ದೇಶದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಗುಜರಾತ್‌ ಜಿಲ್ಲೆಯ ಏಕತಾನಗರದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಏಕತಾ ಪ್ರತಿಮೆಗೆ ಪುಷ್ಪಾರ್ಚಣೆ ಮಾಡಿ ನಂತರ ನೆರೆದಿದ್ದ ಜನರನ್ನು ಉದ್ಧೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಡು ನಕ್ಸಲಿಸಂ ಕೊನೆಯಾಗಿತ್ತಿದೆ, ಆದರೆ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನಗರಗಳಲ್ಲಿ ಹೊಸ ರೀತಿಯ ನಕ್ಸಲರು ಹುಟ್ಟಿಕೊಂಡಿದ್ದಾರೆ. ಇವರು, ನೀವು ಒಟ್ಟಾಗಿ ಇದ್ದಾರೆ ನೀವು ಸುರಕ್ಷಿತವಾಗಿರುತ್ತೀರಿ ಎನ್ನುವ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ.  ಇಂತಹ ನಕ್ಸಲರನ್ನು ದೇಶವು ಗುರುತಿಸಿ ಬಯಲಿಗೆಳೆಯಬೇಕಿದೆ. ಭಾರತ ದೇಶವು ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸದ ಕೆಲವು ಬಾಹ್ಯ ಶಕ್ತಿಗಳು ಜಾತಿ ಆಧಾರದಲ್ಲಿ ದೇಶವನ್ನು ಒಡೆಯುತ್ತಿದ್ದಾರೆ ಅಂತಹವರನ್ನು ಗುರುತಿಸಿ ನಾಶ ಮಾಡಬೇಕು ಎಂದು ಹೇಳಿದರು.

560 ಕ್ಕೂ ಹೆಚ್ಚು ಸಂಸ್ಥಾನಗಳಾಗಿದ್ದ ಭಾರತವನ್ನು ಒಂದುಗೂಡಿಸುವ ಮೂಲಕ ಭಾರತವನ್ನು ಏಕೀಕರಣಗೊಳಿಸಿದ ಸರ್ದಾರ್‌ ಪಟೇಲ್‌ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜನರಿದ್ದರೂ ಎಂದ ಮೋದಿ, ಮುಂದಿನ 2 ವರ್ಷಗಳ ಕಾಲ ದೇಶವು ಪಟೇಲ್‌ ಅವರ 150ನೇ ಜಯಂತಿಯನ್ನು ಆಚರಿಸಲಿದೆ ಎಂದರು.

ಪ್ರಜಾಪ್ರಭುತ್ವವನ್ನು ಬಲಪಡಿಸುವ ʼಒಂದು ರಾಷ್ಟ್ರ, ಒಂದು ಚುನಾವಣೆʼ ಉಪಕ್ರಮವನನು ಜಾರಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ನಮ್ಮ ದೇಶನ್ನು ಬಲಪಡಿಸಲಿದೆ ಎಂದು ಹೇಳಿದರು.

 

Tags: