ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನ ಹೈಲೈಟ್ಸ್ ಈ ಕೆಳಕಂಡಂತಿವೆ.
* ಕೈಗಾರಿಕೆಗಳನ್ನು ಉತ್ತೇಜಿಸಲು ರಾಷ್ಟ್ರೀಯ ಉತ್ಪಾದನಾ ಮಿಷನ್
* ನಗರ ಬಡವರಿಗೆ 30 ಸಾವಿರ ರೂ ಮಿತಿಯೊಂದಿಗೆ ಯುಪಿಐ ಲಿಂಕ್ಡ್ ಕ್ರೆಡಿಟ್ ಕಾರ್ಡ್‌ಗಳು
* ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತೆ 75 ಸಾವಿರ ಹೊಸ ವೈದ್ಯಕೀಯ ಸೀಟುಗಳು
* ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳು
* ಜಲಜೀವನ್ ಮಿಷನ್ ಅಡಿಯಲ್ಲಿ 15 ಕೋಟಿ ಜನರಿಗೆ ಸುರಕ್ಷಿತ ಕುಡಿಯುವ ನೀರು
* ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯಡಿ ಗಿಗ್ ಕಾರ್ಮಿಕರಿಗೆ ಆರೋಗ್ಯ ಕಾರ್ಡುಗಳು
* 8 ಕೋಟಿ ಮಕ್ಕಳು ಮತ್ತು ಒಂದು ಕೋಟಿ ಗರ್ಭಿಣಿಯರಿಗೆ ಅಂಗನವಾಡಿ 2.0
* ದೇಶಾದ್ಯಂತ 50 ಸಾವಿರ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಸ್ಥಾಪನೆ
* ದ್ವಿದಳ ಧಾನ್ಯಗಳ ಉತ್ಪಾದನೆಗೆ ಸ್ವಾವಲಂನೆ ಯೋಜನೆ
* ಬಿಹಾರದಲ್ಲಿ ಮುಖಾನಾ ಮಂಡಳಿ ಸ್ಥಾಪನೆ
* ಕೇಂದ್ರದಿಂದಲೇ ದ್ವಿದಳ ಧಾನ್ಯಗಳ ಖರೀದಿ
* ಹಣ್ಣು ಹಾಗೂ ತರಕಾರಿಗಳ ಉತ್ಪಾದನೆಗೆ ಹೊಸ ಯೋಜನೆ
* ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗಿದ್ದು, 7.7 ಕೋಟಿ ರೈತರಿಗೆ ಅನುಕೂಲವಾಗಲಿದೆ.
* ಪ್ರಧಾನಮಂತ್ರಿ ಧನ್ ಧಾನ್ಯ ಯೋಜನೆ ಕಾರ್ಯಕ್ರಮ ಘೋಷಣೆ
* ದೇಶದ ಹಿಂದುಳಿದ ಜಿಲ್ಲೆಗಳಲ್ಲಿ ಕೃಷಿ ಉತ್ತೇಜನ
* ಎಂಎಸ್‌ಎಂಇಗಳಿಗೆ ಸಾಲಗಳು 5 ಕೋಟಿಯಿಂದ 10 ಕೋಟಿಗೆ ಏರಿಕೆ
* ಹೆಚ್ಚಿನ ಇಳುವರಿ ನೀಡುವ ಪ್ರಭೇದಗಳಿಗೆ ವಿಶೇಷ ರಾಷ್ಟ್ರೀಯ ಮಿಷನ್
* ರಾಜ್ಯಗಳಿಗೆ 1.5 ಲಕ್ಷ ಕೋಟಿ ರೂಗಳ ಸಾಲಗಳು
* 50 ವರ್ಷಗಳವರೆಗೆ ಬಡ್ಡಿರಹಿತ ಸಾಲಗಳು
* ಗಿರ್ ಕಾರ್ಮಿಕರಿಗೆ ಗುರುತಿನ ಚೀಟಿಗಳು
* 27 ವಲಯಗಳಲ್ಲಿನ ನವೋದ್ಯಮಗಳಿಗೆ ಸಾಲಕ್ಕಾಗಿ ವಿಶೇಷ ಕ್ರಮ
* ಹಿರಿಯ ನಾಗರಿಕರಿಗೆ TDS ವಿನಾಯಿತಿ ರೂ 50 ಸಾವಿರದಿಂದ ರೂ 1 ಲಕ್ಷಕ್ಕೆ ಏರಿಕೆ
* ವಿಮಾ ವಲಯದಲ್ಲಿ ಶೇ.100ರಷ್ಟು FDIಗೆ ಅವಕಾಶ