Mysore
25
overcast clouds

Social Media

ಬುಧವಾರ, 20 ಮೇ 2026
Light
Dark

90 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

KRS releases water to canals

ಮಂಡ್ಯ: ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 90 ಅಡಿಗೆ ಕುಸಿದಿದೆ.

124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಜಲಾಶಯದಲ್ಲಿ ಈಗ 90 ಅಡಿ ನೀರು ಸಂಗ್ರಹವಿದೆ. ಒಟ್ಟು 16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ ಬಳಸಲಾಗದ ನೀರು 7 ಟಿಎಂಸಿ ಇದ್ದು, ಕೇವಲ 9 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ.

ಒಂದು ವೇಳೆ ಈ ಬಾರಿ ಮುಂಗಾರುಮಳೆ ಸರಿಯಾದ ಸಮಯಕ್ಕೆ ಪ್ರವೇಶಿಸದಿದ್ದರೆ, ಹಳೇ ಮೈಸೂರು ಭಾಗದ ಜನರು ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಈಗಾಗಲೇ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ಸರ್ಕಾರ ಅಣೆಕಟ್ಟಿನ ನೀರನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಿದೆ.

 

 

Tags:
error: Content is protected !!