Mysore
27
scattered clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಯುಪಿಯಲ್ಲಿ ಮಹಾಕುಂಭಮೇಳ ನಡೆಯುವ ಪ್ರದೇಶ ಈಗ ಹೊಸ ಜಿಲ್ಲೆಯಾಗಿ ಘೋಷಣೆ

ಲಕ್ನೋ: ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳ ನಡೆಯುವ ಪ್ರದೇಶವನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ ಹೊರಡಿಸಿದ್ದಾರೆ.

2025ರ ಜನವರಿಯಲ್ಲಿ ಮಹಾಕುಂಭಮೇಳ ನಡೆಯಲಿದ್ದು, ಅದಕ್ಕೂ ಮೊದಲು ಯುಪಿ ಸರ್ಕಾರ ಈ ಘೋಷಣೆ ಮಾಡಿದೆ.

ಹೊಸ ಜಿಲ್ಲೆಯನ್ನು ಮಹಾ ಕುಂಭಮೇಳ ಜಿಲ್ಲೆ ಎಂದು ಕರೆದಿರುವುದು ವಿಶೇಷವೆನಿಸಿದೆ. ಮುಂದಿನ ವರ್ಷ ನಡೆಯುವ ಮಹಾ ಕುಂಭಮೇಳವನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಿಎಂ ಯೋಗಿ ಆದಿತ್ಯನಾಥ್‌ ಅವರು, ಕುಂಭಮೇಳಕ್ಕೆ ಬರುವ ಸಾರ್ವಜನಿಕರಿಗೆ ಅನುಭವ ಹೆಚ್ಚಿಸುವ ಮತ್ತು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸರ್ಕಾರದ ಬದ್ಧತೆಯನ್ನು ಈ ಕ್ರಮವು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.

ಮಹಾಕುಂಭಮೇಳ ಜಿಲ್ಲೆಯು ಸಂಪೂರ್ಣ ಮೆರವಣಿಗೆ ಮತ್ತು ನಾಲ್ಕು ತಹಸಿಲ್‌ಗಳ ಸದರ್‌, ಸೊರಾನ್‌, ಫುಲ್‌ಪುರ್‌ ಮತ್ತು ಕರ್ಚನಾಗಳ 67 ಗ್ರಾಮಗಳನ್ನು ಒಳಗೊಂಡಿದೆ.

ಇನ್ನು 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳವು ಜನವರಿ.13ರಿಂದ ಫೆಬ್ರವರಿ.26ರವರೆಗೆ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

 

Tags: