Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಭಾರತದ ಮೇಲೆ ಸುಂಕಾಸ್ತ್ರ : ಟ್ರಂಪ್ ಸಮರ್ಥನೆ

ವಾಷಿಂಗ್ಟನ್ : ಅಮೆರಿಕ ಮೇಲೆ ಭಾರತ ನಂಬಲಸಾಧ್ಯ ತೆರಿಗೆಯನ್ನು ವಿಧಿಸಿದ್ದು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ಹೇಳುವ ಮೂಲಕ ಭಾರತದ ವಿರುದ್ಧ ಆರೋಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಚರಿಸಿದ್ದಾರೆ.

ಶ್ವೇತಭವನದಲ್ಲಿ ಮಾಧ್ಯಮಗಳು ಕೇಳಿದ ಭಾರತದ ಮೇಲೆ ವಿಧಿಸಲಾದ ಹೆಚ್ಚಿನ ತೆರಿಗೆಗಳನ್ನು ತೆಗೆದುಹಾಕುವ ಕುರಿತು ಚಿಂತನೆ ನಡೆಸುತ್ತಿದ್ದೀರಾ ಎಂಬ ಪ್ರಶ್ನೆಗೆ ಟ್ರಂಪ್ ಅವರು ಉತ್ತರಿಸಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಭೇಟಿಯಾದ ಭಾರತಿ ವಿಷ್ಣುವರ್ಧನ್‌ ಹಾಗೂ ನಟ ಅನಿರುದ್ಧ್‌

ಭಾರತದ ಮೇಲೆ ವಿಧಿಸಲಾದ ಹೆಚ್ಚಿನ ತೆರಿಗೆಗಳನ್ನು ತೆಗೆದುಹಾಕುವ ಕುರಿತು ಯಾವುದೇ ಚಿಂತನೆಗಳೂ ಇಲ್ಲ. ನಾವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಆದರೆ, ಹಲವು ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧ ಏಪಕ್ಷೀಯವಾಗಿದ್ದು, ನಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲವೂ ಬದಲಾಯಿತು ಎಂದು ಹೇಳಿದ್ದಾರೆ.

ಭಾರತ ನಮಗೆ ಅಪಾರ ಸುಂಕಗಳನ್ನು ವಿಧಿಸುತ್ತಿತ್ತು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ, ಆದ್ದರಿಂದ ಅಮೆರಿಕ ಭಾರತದೊಂದಿಗೆ ಹೆಚ್ಚು ವ್ಯವಹಾರ ಮಾಡುತ್ತಿಲ್ಲ. ಭಾರತದ ಜೊತೆ ನಮ್ಮ ವ್ಯಾಪಾರ-ವ್ಯವಹಾರ ತುಂಬಾ ಕಡಿಮೆ ಇದೆ. ಅವರು (ಭಾರತ) ನಮ್ಮಲ್ಲಿ ಅಪಾರ ಪ್ರಮಾಣದ ವ್ಯಾಪಾರ ಮಾಡುತ್ತಿದ್ದಾರೆ. ನಮ್ಮ ಪಾಲು ತುಂಬಾ ಕಡಿಮೆ ಇದೆ.

ಸರಳವಾಗಿ ಹೇಳುವುದಾದರೆ ಭಾರತ ಬೃಹತ್ ಪ್ರಮಾಣದ ಸರಕು ರಫ್ತು ಮಾಡುತ್ತಿದೆ. ನಮ್ಮ ವಸ್ತುಗಳ ರಫ್ತು ಪ್ರಮಾಣ ತುಂಬಾ ಕಡಿಮೆ ಇದೆ. ಜೊತೆಗೆ ನಮ್ಮ ವಸ್ತುಗಳ ಮೇಲೆ ಭಾರತದಲ್ಲಿ ಅತ್ಯಧಿಕ ಸುಂಕ ವಿಧಿಸಲಾಗುತ್ತಿದೆ. ಕಳೆದ ಕೆಲವು ದಶಗಳಿಂದ ನಡೆಯುತ್ತಿರುವ ಏಕಪಕ್ಷೀಯ ವ್ಯಾಪಾರ ನೀತಿ ಸರಿದೂಗಿಸಲು ಹೆಚ್ಚುವರಿ ಸುಂಕ ವಿಧಿಸಲಾಗಿದೆ. ಮೂರ್ಖತನದಿಂದ ನಾವು ಅವರಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿಲ್ಲ ಎಂದು ಸಮರ್ಥಿಸಿಕೊಂಡರು.

Tags:
error: Content is protected !!