Mysore
22
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ದೇಶದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ನವರಾತ್ರಿ ಗಿಫ್ಟ್‌

ನವದೆಹಲಿ: ದೇಶಾದ್ಯಂತ ಸುಮಾರು 9.5 ಕೋಟಿ ರೈತರಿಗೆ ಇಂದು ಕೇಂದ್ರ ಸರ್ಕಾರದಿಂದ ನವರಾತ್ರಿ ಕೊಡುಗೆ ಸಿಗಲಿದೆ.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ 18ನೇ ಕಂತನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಲಿದ್ದಾರೆ.

ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ತಲಾ ಎರಡು ಸಾವಿರ ನೇರವಾಗಿ ಜಮೆಯಾಗಲಿದೆ. ಈ ಕಂತಿನಲ್ಲಿ ಒಟ್ಟು 20,000 ಕೋಟಿ ರೂಗಳನ್ನು ಸರ್ಕಾರ ರೈತರಿಗೆ ಪಾವತಿಸಲಿದೆ.

ಕಳೆದ 2018ರಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ ಆರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಅರ್ಹ ರೈತರು 3 ಕಂತುಗಳಲ್ಲಿ ತಲಾ ಎರಡು ಸಾವಿರ ರೂಗಳಂತೆ ವಾರ್ಷಿಕ ಒಟ್ಟು ಆರು ಸಾವಿರ ರೂಗಳನ್ನು ಪಡೆಯುತ್ತಾರೆ.

 

Tags:
error: Content is protected !!