Mysore
27
few clouds

Social Media

ಬುಧವಾರ, 21 ಜನವರಿ 2026
Light
Dark

ಗಣರಾಜ್ಯೋತ್ಸವದಂದು ಭಾರೀ ವಿಧ್ವಂಸಕ ಕೃತ್ಯಕ್ಕೆ ಉಗ್ರರ ಸಂಚು?

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಉಗ್ರರು ಮುಂಬರುವ ಜನವರಿ.26ರ ಗಣರಾಜ್ಯೋತ್ಸವದಂದು ಭಾರೀ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದು ಬೆಳಕಿಗೆ ಬಂದಿದೆ.

ಈ ಹಿಂದೆ ಇದೇ ಉಗ್ರರು ದೀಪಾವಳಿ ಹಬ್ಬದ ದಿನದಿಂದ ದೆಹಲಿಯ ವಿವಿಧ ಕಡೆ ಬಾಂಬ್ ಸ್ಫೋಟ ನಡೆಸುವ ಸಂಚು ರೂಪಿಸಿದ್ದರು. ಅದಕ್ಕೂ ಆಗಸ್ಟ್.15ರ ಸ್ವಾತಂತ್ರೋತ್ಸವದಂದು ರಕ್ತದೋಕುಳಿ ನಡೆಸಲು ಕಾರ್ಯತಂತ್ರ ರೂಪಿಸಲಾಗಿತ್ತು.

ಈ ಎರಡೂ ಹಬ್ಬಗಳಂದು ಉಗ್ರರು ದೇಶದ ವಿವಿಧೆಡೆ ಸ್ಫೋಟ ನಡೆಸಬಹುದೆಂಬ ಗುಪ್ತಚರ ವಿಭಾಗ ಎಚ್ಚರಿಸಿದ ಹಿನ್ನಲೆಯಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿಭದ್ರತೆಯನ್ನು ಕೈಗೊಂಡ ಪರಿಣಾಮ ಯೋಜಿತ ಕಾರ್ಯ ವಿಫಲಗೊಂಡಿತ್ತು.

ಇದನ್ನು ಓದಿ: ಕಾರು ಬಾಂಬ್‌ ಸ್ಫೋಟದ ಹಿಂದಿರುವವರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ನರೇಂದ್ರ ಮೋದಿ

ಹೇಗಾದರೂ ಮಾಡಿ ಗಣರಾಜ್ಯೋತ್ಸವ ದಿನದಂದು ಬಾಂಬ್ ಸ್ಫೋಟಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ತಮ್ಮ ಯೋಜಿತ ಕಾರ್ಯವು ಅನುಷ್ಠಾನವಾಗುತ್ತದೆ ಎಂದು ಶಂಕಿತರು ಇದಕ್ಕಾಗಿ ಭಾರೀ ಕಾರ್ಯತಂತ್ರ ಹೆಣೆದಿದ್ದರು.

ಇದಕ್ಕಾಗಿಯೇ ಫರೀದಾಬಾದ್‍ನ ವೈದ್ಯರ ನಿವಾಸದಲ್ಲಿ ಮೂರುವರೆ ಸಾವಿರ ಕೆಜಿ ತೂಕದ ಸ್ಫೋಟಕ ವಸ್ತುಗಳು, ಬಾಂಬ್‍ಗಳು, ಎ.ಕೆ47 ಸೇರಿದಂತೆ ವಿವಿಧ ಶ್ರೇಣಿಯ ಸ್ಫೋಟಕಗಳ ವಸ್ತುಗಳನ್ನು ಗುಪ್ತಚರ ವಿಭಾಗದ ಮಾಹಿತಿ ಮೇರೆಗೆ ವಶಪಡಿಸಿಕೊಳ್ಳಲಾಯಿತು.

ಮೂಲಗಳ ಪ್ರಕಾರ, ಜನವರಿ 26ರಂದು ದೆಹಲಿಯಲ್ಲಿ ಬಹುಭಯೋತ್ಪಾದಕ ದಾಳಿಗಳನ್ನು ನಡೆಸುವ ಯೋಜನೆಯ ಭಾಗವಾಗಿ ಮುಜಮಿಲ್ ಮತ್ತು ಶಂಕಿತ ಆತ್ಮಹತ್ಯಾ ಬಾಂಬರ್ ಡಾ. ಉಮರ್ ನಬಿ ಈ ವರ್ಷದ ಆರಂಭದಲ್ಲಿ ಕೆಂಪು ಕೋಟೆ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

Tags:
error: Content is protected !!