Mysore
22
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ದೇಶದಲ್ಲಿ ಸಾಕಷ್ಟು ತೈಲ ದಾಸ್ತಾನು : ವಾಣಿಜ್ಯ ಅನಿಲ ಪೂರೈಕೆಯಲ್ಲಿ ಶೇ.70%ಕ್ಕೆ ಹೆಚ್ಚಳ

ಹೊಸದಿಲ್ಲಿ : ಇರಾನ್ ಸಂಘರ್ಷದಿಂದಾಗಿ ಉಂಟಾದ ಅಂತರರಾಷ್ಟ್ರೀಯ ಅನಿಲ ಪೂರೈಕೆ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಶೇ.70ರಷ್ಟಕ್ಕೆ ಏರಿಸಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದ ಪತ್ರದಲ್ಲಿ, ಹಿಂದಿನ ಶೇ.50ರ ಹಂಚಿಕೆಗೆ ಹೆಚ್ಚುವರಿಯಾಗಿ ಶೇ.20ರ ಹಂಚಿಕೆಯನ್ನು ಮಂಜೂರು ಮಾಡಿದೆ ಎಂದು ತಿಳಿಸಿದೆ.

ಇನ್ನೂ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ, ದೇಶದಲ್ಲಿ ಪ್ರಸ್ತುತ ಸೂಕ್ತ ರೀತಿಯಲ್ಲಿ ಕಚ್ಚಾ ತೈಲ ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ಎರಡೂ ಮೂರು ತಿಂಗಳಿಗೆ ಆಗುವಷ್ಟು ಇಂಧನ ದಾಸ್ತಾನು ಇದೆ. ಜತೆಗೆ ದೇಶೀಯ ಎಲ್‌ಪಿಜಿ ಉತ್ಪಾದನೆಯು ಸಹ ಹೆಚ್ಚಾಗಿದೆ ಎಂದಿದ್ದಾರೆ.

ಪಶ್ಚಿಮ ಸಂಘರ್ಷದದಿಂದ ಉಂಟಾಗಿರುವ ಪರಿಣಾಮವನ್ನು ಪ್ರಸ್ತಾಪಿಸಿದ ಅವರು, ಕಚ್ಚಾತೈಲ, ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆಗಳ ಮೇಲೆ ಪರಿಣಾಮ ಬೀರಿದೆ. ಜತೆಗೆ ಜಾಗತಿಕ ಬೆಲೆಯಲ್ಲಿ ಹೆಚ್ಚಳವು ಆಗಿದೆ ಎಂದರು.

ಭಾರತ ಶೇ.90 ರಷ್ಟು ಎಲ್‌ಪಿಜಿಯನ್ನು ಹಾರ್ಮುಜ್‌ ಜಲಸಂಧಿಯ ಮೂಲಕ ಆಮದು ಮಾಡಿಕೊಳ್ಳುತ್ತದೆ. ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿತ್ತು. ಬಳಿಕ ಹಂತ ಹಂತವಾಗಿ ಮರು ಸ್ಥಾಪಿಸಲಾಯಿತು. ಕ್ರಮೇಣ ಸರಬರಾಜನ್ನು ಶೇ.20 ರಿಂದ ಶೇ.70ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

 

Tags:
error: Content is protected !!