Mysore
24
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಕೆಪಿಎಸ್‌ಸಿ ರದ್ದು: ಮುಖ್ಯಮಂತ್ರಿಗಳು ಶೀಘ್ರ ನಿರ್ಧಾರ ಕೈಗೊಳ್ಳಲಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ. ಸರ್ಕಾರಿ ನೇಮಕಾತಿಗಳಲ್ಲಿ ಪಾರದರ್ಶಕತೆಯನ್ನು ಕಾಯ್ದು ಕೊಳ್ಳಲು, ಅರ್ಹರಿಗೆ ಸರ್ಕಾರಿ ಉದ್ಯೋಗಗಳನ್ನು ದೊರಕಿಸಿ ಕೊಡುವ ಘನ ಉದ್ದೇಶವನ್ನು ಹೊತ್ತು ಸ್ಥಾಪನೆಗೊಂಡ ಈ ಆಯೋಗ ಸ್ವತಃ ಭ್ರಷ್ಟಾಚಾರದ ಕೂಪವಾಗಿ ಪರಿಣಮಿಸಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ.

ರಾಜ್ಯ ಲೋಕ ಸೇವಾ ಆಯೋಗದ ವಿರುದ್ಧ ಹಲವಾರು ದಶಕಗಳಿಂದ ಭ್ರಷ್ಟಾಚಾರ,ಅಕ್ರಮ ನೇಮಕಾತಿ, ಸ್ವಜನ ಪಕ್ಷಪಾತ ಮುಂತಾದ ಆರೋಪಗಳು ಕೇಳಿ ಬರುತ್ತಲೇ ಇದ್ದರೂ ಇತ್ತೀಚೆಗಂತೂ ಇಂತಹ ಆರೋಪಗಳು ಮುಗಿಲು ಮುಟ್ಟಿವೆ. ಇದು ಆತಂಕಕಾರಿಯಾದ ವಿಚಾರ.

ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳ ಆಲೋಚನೆ ಸರಿಯಾಗಿಯೇ ಇದೆ. ಸಾಧ್ಯವಾದಷ್ಟು ಬೇಗ ಈ ನಿಷ್ಪ್ರಯೋಜಕ ಆಯೋಗವನ್ನು ರದ್ದುಗೊಳಿಸಿ, ತೆರಿಗೆದಾರರ ಹಣವನ್ನು ಉಳಿಸುವಂತಾಗಲಿ. ಅದೇ ವೇಳೆ, ಬದಲಿ ವ್ಯವಸ್ಥೆಯನ್ನೂ ರಾಜ್ಯ ಸರ್ಕಾರ ಕ್ಷಿಪ್ರಗತಿಯಲ್ಲಿ ಕೈಗೊಳ್ಳಲಿ.

-ಕೆ.ವಿ.ವಾಸು, ಮೈಸೂರು

Tags:
error: Content is protected !!