Mysore
28
scattered clouds

Social Media

ಸೋಮವಾರ, 11 ಮೇ 2026
Light
Dark

ಚಿನ್ನ ಖರೀದಿ ನಿಲ್ಸಿ ; ಇಂಧನ ಕಡಿಮೆ ಬಳಸಿ : ಬೆಲೆ ಏರಿಕೆ ಮುನ್ಸೂಚನೆ ಕೊಟ್ರಾ ಪ್ರಧಾನಿ ಮೋದಿ?

ಹೈದರಾಬಾದ್‌ : ಅಮೆರಿಕ-ಇರಾನ್‌ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಮಾಡುವಂತೆ ಹಾಗೂ ಚಿನ್ನ ಖರೀದಿ ನಿಲ್ಲಿಸುವಂತೆ ದೇಶದ ಜನತೆಗೆ ಸಲಹೆ ನೀಡಿದ್ದಾರೆ.

ವರ್ಕ್ ಫ್ರಮ್‌ ಹೋಮ್‌ ರೂಢಿಸಿಕೊಳ್ಳಿ

ತೆಲಂಗಾಣದ ಸಿಕಂದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂಧನ ಬಳಕೆ ತಗ್ಗಿಸಿ, ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸಿ, ವರ್ಕ್ ಫ್ರಮ್‌ ಹೋಮ್‌ ರೂಢಿಸಿಕೊಳ್ಳಿ, ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ, ಪರಿಸರ ಸಂರಕ್ಷಣೆಗೆ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಚೀಲಗಳ ಬಳಕೆ ನಿಲ್ಲಿಸಿ, ತಾಯಿ ಹೆಸರಲ್ಲಿ ಒಂದು ಸಸಿ ನೆಡುವ (ಏಕ್‌ ಪೇಡ್‌ ಮಾ ಕೆ ನಾಮ್‌) ಅಭಿಯಾನ ಉತ್ತೇಜಿಸಿ ಎಂದು ಕರೆ ನೀಡಿದ್ದಾರೆ.

 

ಚಿನ್ನ ಖರೀದಿ ನಿಲ್ಸಿ

ಹಾಗೆಯೇ ಭಾರತದ ವಿದೇಶಿ ವಿನಿಮಯ ಉಳಿಸಲು ಒಂದು ವರ್ಷ ಕಾಲ ಮದುವೆಗೆ ಚಿನ್ನ ಕೊಳ್ಳುವುದನ್ನು ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಭಾರತಕ್ಕೆ ಬಹುತೇಕ ಚಿನ್ನ ಆಮದು ಮಾಡಿಕೊಳ್ಳಬೇಕು, ಆದರೆ ಜಾಗತಿಕ ಅನಿಶ್ಚಿತತೆಯಿಂದ ಬೆಲೆ ಗಗನ ಮುಟ್ಟುತ್ತಿದೆ. ವಿದೇಶಿ ವಿನಿಮಯ ಖರ್ಚೂ ಹೆಚ್ಚಾಗುತ್ತಿರುವುದರಿಂದ ಪರಿಸ್ಥಿತಿ ಸುಧಾರಿಸುವವರಿಗೆ ಚಿನ್ನ ಖರೀದಿ ಬೇಡ ಎಂದು ಸಲಹೆ ಕೊಟ್ಟಿದ್ದಾರೆ. ಇಂಧನ ಸಂರಕ್ಷಣೆ ರಾಷ್ಟ್ರೀಯ ಜವಾಬ್ದಾರಿ ಎಂದೂ ಮೋದಿ ಹೇಳಿದ್ದಾರೆ.

 

ಇಂಧನ ಕಡಿಮೆ ಬಳ್ಸಿ

ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಕಚ್ಚಾತೈಲದ ಬೆಲೆ ಭಾರಿ ಏರಿಕೆ ಆಗಿದೆ. ಪಾಕಿಸ್ತಾನ ಸೇರಿದಂತೆ ಅಮೆರಿಕದಲ್ಲೂ ತೈಲ ಬೆಲೆ ತುಟ್ಟಿಯಾಗಿದೆ. ಆದರೆ ಸದ್ಯ ಡಿಸೇಲ್ ಪೆಟ್ರೋಲ್ ಬೆಲೆ ದೇಶದಲ್ಲಿ ಹೆಚ್ಚಳವಾಗಿಲ್ಲ. ಆದರೆ ಇದರ ಸಾಧ್ಯತೆ ಬಗ್ಗೆ ಪ್ರಧಾನಿ ಮೋದಿ ಅವರ ಮಾತಲ್ಲೇ ಮುನ್ಸೂಚನೆ ಇದೆ.

ಪೆಟ್ರೋಲ್- ಡೀಸೆಲ್ ಬಳಕೆ ಕಡಿಮೆ ಮಾಡಬೇಕು. ಇದರಿಂದ ವಿದೇಶಗಳಿಂದ ತರಿಸುವ ಆಮದು ಪ್ರಮಾಣದಲ್ಲಿ ಕಡಿಮೆ ಮಾಡಬಹುದು‌ ವಿದೇಶಿ ವಿನಿಮಯಕ್ಕಾಗುವ ಖರ್ಚು ವೆಚ್ಚ ತಗ್ಗಿಸಬಹುದು ಎಂದಿದ್ದಾರೆ. ಹೀಗಾಗಿ ಜನರು ಯೋಚನೆ ಮಾಡಿ ಇಂಧನ ಬಳಸಬೇಕು. ಕೊರೊನಾ ಸಮಯದಲ್ಲಿ ವರ್ಕ್ ಫ್ರಾಂ ಹೋಂ ಮಾಡಲಾಗುತ್ತಿತ್ತು. ಆನ್ ಲೈನ್ ಮೀಟಿಂಗ್‌ಗಳನ್ನು ನಡೆಸಲಾಗುತ್ತಿತ್ತು. ವಿಡಿಯೋ ಕಾನ್ಫರೆನ್ಸ್ ಗಳನ್ನು ನಡೆಸಲಾಗ್ತಿತ್ತು. ಆಗೆಲ ಅದು ಅಭ್ಯಾಸವಾಗಿತ್ತು. ಈಗಲೂ ತೈಲ ಬಳಕೆ ಕಡಿಮೆ ಮಾಡಲು, ದೇಶದ ಮೇಲಿನ ಹೆಚ್ಚುವರಿ ಹೊರೆ ತಗ್ಗಿಸಲು ಇದನ್ನು ಮತ್ತೆ ಜಾರಿಗೆ ತರಬೇಕೆಂದು ‌ಮನವಿ ಮಾಡಿದ್ದಾರೆ.

ಇರಾನ್ – ಅಮೆರಿಕ ಯುದ್ಧದ ಬಳಿಕ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 70 ಯುಎಸ್ ಡಿ ಯಿಂದ 126 ಯುಎಸ್ಡಿ ಗೆ ಏರಿಕೆಯಾಗಿದೆ. ಇವೆಲ್ಲ ಹರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿದ್ದು, ಇನ್ನೂ ಕೂಡಾ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಹೀಗಾಗಿ ತೈಲದ ಬೆಲೆಯೂ ಇಳಿಕೆಯಾಗಿಲ್ಲ.

Tags:
error: Content is protected !!