ನವದೆಹಲಿ: ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇಂದು(ಜೂ.9) ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮೋದಿ ಅವರ ಸಂಪುಟದಲ್ಲಿ ಮೋದಿಯೂ ಸೇರಿದಂತೆ ಒಟ್ಟು 7 ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸ್ಥಾನ ಪಡೆದಿದ್ದಾರೆ. ಮೊದಲಿಗೆ ಮೋದಿ ಅವರು 2014 ರಲ್ಲಿ ಮೊದಲ ಸಲ ಪ್ರಧಾನಿಯಾಗುವುದಕ್ಕಿಂತ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಉಳಿದಂತೆ, ಮಧ್ಯ ಪ್ರದೇಶದ ಶಿವರಾಜ್ ಸಿಂಗ್ ಚೌಹಣ್, ಉತ್ತರ ಪ್ರದೇಶದ ರಾಜನಾಥ್ ಸಿಂಗ್, ಹರಿಯಾಣದ ಮನೋಹರ್ ಲಾಲ್ ಖಟ್ಟರ್, ಕರ್ನಾಟಕ ಎಚ್.ಡಿ ಕುಮಾರಸ್ವಾಮಿ, ಅಸ್ಸಾಂನ ಸರ್ಬಾನಂದ ಸೋನವಾಲ್ ಹಾಗೂ ಬಿಹಾರದ ರಾಮ್ ಮಾಂಝಿ ಅವರು ಸಂಪುಟದಲ್ಲಿದ್ದಾರೆ.