Mysore
29
scattered clouds

Social Media

ಭಾನುವಾರ, 19 ಏಪ್ರಿಲ 2026
Light
Dark

ಬಿಜೆಪಿ ಹಿರಿಯ ನಾಯಕ ವಿಜಯ್‌ ಕುಮಾರ್‌ ಮಲ್ಹೋತ್ರಾ ನಿಧನ

ನವದೆಹಲಿ: ಹಿರಿಯ ಬಿಜೆಪಿ ನಾಯಕ ವಿಜಯ್‌ ಕುಮಾರ್‌ ಮಲ್ಹೋತ್ರಾ ಅವರಿಂದು ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. 94 ವರ್ಷದ ಮಲ್ಹೋತ್ರಾ ದೆಹಲಿ ಬಿಜೆಪಿಯ ಮೊದಲ ಅಧ್ಯಕ್ಷರಾಗಿದ್ದರು ಎಂದು ಪಕ್ಷವು ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

ಇದನ್ನು ಓದಿ : ಪದ್ಮಭೂಷಣ, ನಾಡಿನ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಇನ್ನಿಲ್ಲ

1999ರ ಲೋಕಸಭಾ ಚುನಾವಣೆಯಲ್ಲಿ ಮಲ್ಹೋತ್ರಾ ದೆಹಲಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಸೋಲಿಸಿದ್ದರು. ಇದು ಅವರ ಅತಿದೊಡ್ಡ ರಾಜಕೀಯ ವಿಜಯವಾಗಿದೆ.

ಕಳೆದ 45 ವರ್ಷಗಳಿಂದ ಮಲ್ಹೋತ್ರಾ ದೆಹಲಿಯಿಂದ ಐದು ಬಾರಿ ಸಂಸದ ಹಾಗೂ ಎರಡು ಬಾರಿ ಶಾಸಕರಾಗಿದ್ದಾರೆ. ಇದರಿಂದಾಗಿ ಅವರು ರಾಜಧಾನಿಯಲ್ಲಿ ಬಿಜೆಪಿಯ ಅತ್ಯಂತ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

Tags:
error: Content is protected !!