Mysore
36
few clouds

Social Media

ಸೋಮವಾರ, 20 ಏಪ್ರಿಲ 2026
Light
Dark

ಕಾವೇರಿ ನದಿಯಲ್ಲಿ ಈಜಲು ಹೋಗಿ 6 ಮಂದಿ ಸಾವು

ಕೆ.ಆರ್.ನಗರ : ತಾಲೂಕಿನ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಬಳಿ ನಡೆದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ಕಾರ್ಯಕ್ರಮಕ್ಕೆ ಬಂದಿದ್ದವರು ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಎಂಟು ಬಂದಿದ್ದವರರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐಮನ್ (13 ವರ್ಷ, ಬೆಂಗಳೂರು), ಅಫೀಫ್(13 ವರ್ಷ, ಕೆ.ಆರ್.ನಗರ), ಯಾಸಿನ್ (23 ವರ್ಷ, ಬೆಂಗಳೂರು), ನೇಹಾ (22 ವರ್ಷ, ಬೆಂಗಳೂರು), ಫಾತಿಮಾ (30 ವರ್ಷ, ಊಟಿ), ಉಮೆರ್ (5 ವರ್ಷ, ಮೈಸೂರು) ಮೃತಪಟ್ಟವರು.

ಪೊಲೀಸರು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಭಾಗವಹಿಸಿದ್ದರು.

ಘಟನೆ ಕುರಿತು ಮಾತನಾಡಿರುವ ಎಸ್‌ಪಿ ಮಲ್ಲಿಕಾರ್ಜುನ್‌ ಬಾಲದಂಡಿ, ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ 8 ಮಂದಿಯಲ್ಲಿ ಮುಳುಗಿ 6 ಜನ ಸಾವನ್ನಪ್ಪಿದ್ದಾರೆ. ಘಟನೆ ಹೇಗಾಯಿತು ಎನ್ನುವ ಬಗ್ಗೆ ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಇಂತಹ ಘಟನೆ ಜರುಗದಂತೆ ನಮ್ಮ ಇಲಾಖೆಯಿಂದ ಎಚ್ವರಿಕೆ ವಹಿಸಲಾಗುವುದು ಎಂದರು.

 

Tags:
error: Content is protected !!