Mysore
25
few clouds

Social Media

ಗುರುವಾರ, 05 ಡಿಸೆಂಬರ್ 2024
Light
Dark

ದೇಶದಲ್ಲಿ ಬ್ರಿಟಿಷರ ಆಳ್ವಿಕೆ ವಿರೋಧಿಸಿದ ಕೀರ್ತಿ ಟಿಪ್ಪು ಸುಲ್ತಾನನಿಗೆ ಸಲ್ಲುತ್ತದೆ: ಜೈ.ಶಂಕರ್‌

ನವದೆಹಲಿ: ಭಾರತ ದೇಶದ ಇತಿಹಾಸದಲ್ಲಿ ಬ್ರಿಟಿಷರ ಆಳ್ವಿಕೆ ವಿರೋಧಿಸಿ ಅವರ ವಿರುದ್ಧ ಹೋರಾಟ ನಡೆಸಿದ ಕೀರ್ತಿ ಟಿಪ್ಪು ಸುಲ್ತಾನನಿಗೆ ಸಲ್ಲುತ್ತದೆ ಎಂದು ಭಾರತೀಯ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತಿಳಿಸಿದ್ದಾರೆ.

ಇತಿಹಾಸಕಾರ ವಿಕ್ರಂ ಸಂಪತ್‌ ರಚಿಸಿರುವ ಟಿಪ್ಪು ಸುಲ್ತಾನ್‌: ದಿ ಸಗಾ ಆಫ್‌ ದಿ ಮೈಸೂರು ಇಂಟರ್‌ಗ್ನಮ್‌ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ ಅತ್ಯಂತ ಸಂಕೀರ್ಣ ವ್ಯಕ್ತಿಯಾಗಿದ್ದರು. ಅವರು ತಮ್ಮ ಸಾವನ್ನು ಲೆಕ್ಕಿಸದೆ ಹೋರಾಟ ನಡೆಸಿದ ಕೀರ್ತಿ ಸಲ್ಲುತ್ತದೆ. ಆದರೆ ಆತನ ಸೋಲು ಹಾಗೂ ಸಾವು ಒಂದು ಮಹತ್ವದ ತಿರುವು ಪಡೆದಿದ್ದನ್ನು ಭಾರತೀಯ ಇತಿಹಾಸ ಪುಟಗಳಲ್ಲಿ ಕಾಣಬಹುದಾಗಿದೆ ಎಂದಿದ್ದಾರೆ.

ಟಿಪ್ಪು ಸುಲ್ತಾನ್‌ ತನ್ನ ಆಡಳಿತ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದರಲ್ಲಿ ಹೆಚ್ಚು ಗಮನಹರಿಸಿದ್ದರಿಂದ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಟಿಪ್ಪು ಹೇಗೆ ತನ್ನ ಸಾಧನೆಗೆ ಪ್ರಮುಖ ಕಾರಣರಾಗಿದ್ದರೋ ಅದೇ ರೀತಿಯಲ್ಲಿ ವಿವಾದಾತ್ಮಕ ಅಂಶಗಳಿಗೂ ಕೆಲಸ ಮಾಡಿದ್ದಾರೆ. ಟಿಪ್ಪು ದೇಶಕ್ಕಾಗಿ ತಮ್ಮ ಮಕ್ಕಳನ್ನೇ ಅಡವಿಟ್ಟಿದ್ದರು ಎಂದು ಹೇಳಿದ್ದಾರೆ.

 

 

 

Tags: