ನಟ ರಿಷಬ್ ಶೆಟ್ಟಿ ಹೊಗಳುವ ಭರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಂತಾರ ದೈವಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾತನಾಡಿದ ರಣವೀರ್ ಸಿಂಗ್ ಅವರು, ಕಾಂತಾರ-1 ಚಿತ್ರವನ್ನು ಥಿಯೇಟ್‌ನಲ್ಲಿ ನೋಡಿದೆ. ರಿಷಬ್ ಶೆಟ್ಟಿ ಅವರ ಅಭಿನಯ ನಿಜವಾಗಿಯೂ ಅದ್ಭುತವಾಗಿದೆ. ಹೆಣ್ಣು ದೈವ ನಿಮ್ಮ ಮೇಲೆ ಬರುತ್ತಲ್ಲ ಅದು ಅದ್ಭುತ. ನಿಮ್ಮ ನಟನೆ ಸೂಪರ್ ಎಂದು ದೈವದ ಅನುಕರಣೆ ಮಾಡಿದ್ದಾರೆ. ಈ ಮೂಲಕ ಗುಳಿಗ ದೈವ, ಚಾಮುಂಡಿಗೆ ಅವಮಾನ ಮಾಡಿದ್ದಾರೆ.
ನಟ ರಣವೀರ್ ಕಾಂತಾರ ದೈವಕ್ಕೆ ಅವಮಾನ ಮಾಡಿದ್ದಾರೆ. ಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ರಣವೀರ್ ಸಿಂಗ್ ವಿವಾದ ಉಂಟು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.





