Mysore
22
clear sky

Social Media

ಮಂಗಳವಾರ, 21 ಏಪ್ರಿಲ 2026
Light
Dark

ಛತ್ತೀಸ್‌ಗಢದಲ್ಲಿ ಖಾಸಗಿ ವಿಮಾನ ಪತನ: ಪೈಲಟ್‌ ಹಾಗೂ ಕೋ ಪೈಲಟ್‌ ಸಾವು

ರಾಯ್ಪುರ: ಛತ್ತೀಸ್‌ಗಢದಲ್ಲಿ ಖಾಸಗಿ ವಿಮಾನವೊಂದು ಪತನವಾಗಿದ್ದು, ಪೈಲಟ್‌ ಹಾಗೂ ಸಹ ಪೈಲಟರ್‌ ಇಬ್ಬರೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಛತ್ತೀಸ್‌ಗಢದ ಜಶ್‌ಪುರದಲ್ಲಿ ಈ ದುರಂತ ಸಂಭವಿಸಿದೆ. ವಿಮಾನ ಪತನಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಇದೊಂದು ಖಾಸಗಿ ವಿಮಾನವಾಗಿದ್ದು, ಭೂಮಿಯಿಂದ ಕೇವಲ 30 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಪತನಗೊಂಡಿದೆ.

ವಿಮಾನ ಪತನಕ್ಕೂ ಮುನ್ನ ವಿಮಾನ ಮರಕ್ಕೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿ ಪೈಲಟ್‌, ಸಹ ಪೈಲಟ್‌ ಬಿಟ್ಟು ಪ್ರಯಾಣಿಕರು ಯಾರೂ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

 

Tags:
error: Content is protected !!