Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ

Prime Minister Narendra Modi returns to India after five-nation tour

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ.

ಇಂದು ಬೆಳಿಗ್ಗೆ ಪಾಲಂ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿಳಿದಿದ್ದು, ಎಂಟು ದಿನಗಳ ಪ್ರವಾಸದಲ್ಲಿ ಘಾನಾ, ಟ್ರನಿಡಾಡ್‌ ಮತ್ತು ಟೊಬೆಗೊ, ಅರ್ಜೆಂಟೀನಾ, ಬ್ರೆಜಿಲ್‌ ಮತ್ತು ನಮೀಬಿಯಾ ಸೇರಿದಂತೆ ಐದು ದೇಶಗಳಿಗೆ ಭೇಟಿ ನೀಡಿದ್ದರು.

ಪ್ರಧಾನಿ ಮೋದಿ ಅವರಿಗೆ ಘಾನಾದ ಅತ್ಯುನ್ನತ ನಾಗರಿಕ ದಿ ಆಫೀಸರ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಸ್ಟಾರ್‌ ಆಫ್‌ ಘಾನಾ ನೀಡಿ ಗೌರವಿಸಲಾಗಿತ್ತು.

ಟೊಬೆಗೊ ಅಧ್ಯಕ್ಷ ಕ್ರಿಸ್ಟೀನ್‌ ಕಂಗಲೂ ಅವರು ಮೋದಿಗೆ ಟ್ರಿನಿಡಾಡ್‌ ಮತ್ತು ಟೊಬೆಗೊದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ದಿ ಆರ್ಡರ್‌ ಆಫ್‌ ದಿ ರಿಪಬ್ಲಿಕ್‌ ಆಫ್‌ ಟ್ರಿನಿಡಾಡ್‌ ಮತ್ತು ಟೊಬೆಗೊ ಅನ್ನು ಪ್ರದಾನ ಮಾಡಿದರು.

ಬಳಿಕ ನಮಿಬಿಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲೂ ಕೂಡ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್‌ ಆಫ್‌ ದಿ ಮೋಸ್ಟ್‌ ಏನ್ಷಿಯಂಟ್‌ ವೆಲ್ವಿಟ್ಟಿಯಾ ಮಿರಾಬಿಲಿಸ್‌ ನೀಡಿ ಗೌರವಿಸಲಾಯಿತು.

ಇನ್ನು ಬ್ರೆಜಿಲ್‌ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್‌ ಅಧ್ಯಕ್ಷ ಲೂಯಿಸ್‌ ಇನಾಸಿಯೊ ಲುಲಾ ಡ ಸಿಲ್ವಾ ಅವರು ದೇಶದ ಅತ್ಯುನ್ನತ ನಾಗರಿಕ ಗೌರವವಾದ ಗ್ರ್ಯಾಂಡ್‌ ಕಾಲರ್‌ ಆಫ್‌ ದಿ ನ್ಯಾಷನಲ್‌ ಆರ್ಡರ್‌ ಆಫ್‌ ದಿ ಸದರ್ನ್‌ ಕ್ರಾಸ್‌ ಪ್ರಶಸ್ತಿ ಪ್ರದಾನ ಮಾಡಿದರು.

Tags:
error: Content is protected !!