ನವದೆಹಲಿ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಧರ್ಮೇಂದ್ರ ಜಿ ಅವರ ನಿಧನವು ಭಾರತೀಯ ಚಿತ್ರರಂಗದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಅವರು ಒಬ್ಬ ಅಪ್ರತಿಮ ಚಲನಚಿತ್ರ ವ್ಯಕ್ತಿತ್ವ. ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರವೂ ಎಲ್ಲರನ್ನು ಮೋಡಿ ಮಾಡಿದೆ. ಅವರು ಓರ್ವ ಅದ್ಭುತ ನಟ. ಅವರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ರೀತಿ ಹಲವು ಜನರನ್ನು ಆಕರ್ಷಿಸಿತು. ಧರ್ಮೇಂದ್ರ ಜಿ ಅವರ ಸರಳತೆ, ನಮ್ರತೆಗೆ ಸಮಾನವಾಗಿ ಮೆಚ್ಚುಗೆ ಪಡೆದರು. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳೊಂದಿಗೆ ಇವೆ. ಓಂ ಶಾಂತಿ ಎಂದು ಪ್ರಧಾನಿ ರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.





