Mysore
33
scattered clouds

Social Media

ಶನಿವಾರ, 28 ಮಾರ್ಚ್ 2026
Light
Dark

ತಿರುಪತಿ ದೇಗುಲಕ್ಕೆ 2 ಬೆಳ್ಳಿ ದೀಪ ಕಾಣಿಕೆಯಾಗಿ ನೀಡಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌

ತಿರುಮಲ: ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಅವರು 50 ಕೆಜಿ ತೂಕದ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಹಾಗೂ ದೇವಾಲಯದ ಅಧಿಕಾರಿಗಳು ರಂಗನಾಯಕುಲ ಮಂಟಪದಲ್ಲಿ ಬೆಳ್ಳಿ ದೀಪಗಳನ್ನು ಪ್ರಮೋದಾದೇವಿ ಒಡೆಯರ್‌ ಅವರಿಂದ ಸ್ವೀಕರಿಸಿದರು.

ಪ್ರತಿ ಬೆಳ್ಳಿ ದೀಪ ಸುಮಾರು 50 ಕೆಜಿ ತೂಕವಿದ್ದು, ಎರಡೂ ದೀಪಗಳು ಸೇರಿ ಒಂದು ಕ್ವಿಂಟಾಲ್‌ ತೂಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 300 ವರ್ಷಗಳ ಹಿಂದೆ ಅಂದಿನ ಮೈಸೂರು ಮಹಾರಾಜರು ಬೃಹತ್‌ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದರು. ಅವುಗಳನ್ನು ಗರ್ಭಗುಡಿಯಲ್ಲಿ ಬೆಳಗಿಸಲಾಗುತ್ತದೆ. ಮೂರು ಶತಮಾನಗಳ ನಂತರ ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಅವರು ಮತ್ತೊಮ್ಮೆ ತಿರುಪತಿ ತಿಮ್ಮಪ್ಪನಿಗೆ ಬೆಳ್ಳಿ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ

Tags:
error: Content is protected !!