Mysore
27
scattered clouds
Light
Dark

ಮೂರು ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ: ಉತ್ತರ ಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಸಂಪರ್ಕವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು 3 ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ ತೋರಿದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಚೆನ್ನೈ ಸೆಂಟ್ರಲ್‌ನಿಂದ ನಾಗರ್‌ಕೋಯಿಲ್‌, ಮಧುರೈನಿಂದ ಬೆಂಗಳೂರು ಕಂಟೋನ್ಮೆಂಟ್‌ ಹಾಗೂ ಮೀರತ್‌ ಸಿಟಿ-ಲಕ್ನೋ ಸಂಪರ್ಕಿಸುವ ರೈಲುಗಳನ್ನು ಉದ್ಘಾಟಿಸಿದರು.

ಈ ವಂದೇ ಭಾರತ್‌ ರೈಲು ಸೇವೆಯು ಯಾತ್ರಾರ್ಥಿಗಳಿಗೆ ಮೀನಾಕ್ಷಿ ಅಮ್ಮನ ದೇವಸ್ಥಾನ, ಮಧುರೈ ಮತ್ತು ಕುಮಾರಿ ಅಮ್ಮನ್‌ ದೇವಸ್ಥಾನ, ಕನ್ಯಾಕುಮಾರಿಗೆ ಪ್ರಯಾಣಿಸಲು ಅನುಕೂಲವಾಗುತ್ತದೆ.

ಈ ವಂದೇ ಭಾರತ್‌ ರೈಲು ಸೇವೆಯಿಂದ ಜನರು ಯಾತ್ರಾ ಸ್ಥಳಗಳಿಗೆ ಸಂಚರಿಸಿ ಧಾರ್ಮಿಕ ಪ್ರವಾಸೋದ್ಯಮ ಉತ್ತೇಜಿಸುವ ನಿರೀಕ್ಷೆಯಿದೆ. ಹಾಗಾಗಿ ಪ್ಲಾನ್‌ ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು 3 ಹೊಸ ವಂದೇ ಭಾರತ್‌ ರೈಲು ಸೇವೆಗಳಿಗೆ ಚಾಲನೆ ನೀಡಿದ್ದಾರೆ.