ನವದೆಹಲಿ: ಪಾಕ್‌ನಿಂದ ಪರಮಾಣು ಬೆದರಿಕೆ ಇಲ್ಲ ಹಾಗೂ ಅಮೇರಿಕಾ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ ನೀಡಿದ್ದಾರೆ.
ಆಪರೇಷನ್ ಸಿಂಧೂರ ಹಾಗೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕುರಿತು ಮಾತನಾಡಿದ ವಿಕ್ರಮ್ ಮಿಶ್ರಿ ಅವರು, ಸೇನಾ ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರವನ್ನು ದ್ವಿಪಕ್ಷೀಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಎಂದರು. ಇದರ ಜೊತೆಗೆ ಪಾಕ್‌ನಿಂದ ಪರಮಾಣು ಬಾಂಬ್ ಬೆದರಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಕದನ ವಿರಾಮಕ್ಕೆ ಅಮೇರಿಕಾ ಯಾವುದೇ ಮಧ್ಯಸ್ಥಿಕೆ ವಹಿಸಿಲ್ಲ. ಅಮೇರಿಕಾ ಅಧ್ಯಕ್ಷರು ನಮ್ಮ ಅನುಮತಿ ಪಡೆದಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಭಾರತದ ವಿರುದ್ಧ ಟರ್ಕಿಯ ಪ್ರತಿಕೂಲ ನಿಲುವಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆ ದೇಶವು ಸಾಂಪ್ರದಾಯಿಕವಾಗಿ ಭಾರತದ ಬೆಂಬಲಿಗನಲ್ಲ ಎಂದು ಹೇಳಿದರು.