Mysore
35
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಮುಂಬೈ: 24 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ, ಐವರ ಬಂಧನ

ಮುಂಬೈ: ಹೈದರಾಬಾದ್‌ನಿಂದ ಮುಂಬೈಗೆ ತೆರಳುತ್ತಿದ್ದ ಬಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 24 ಕೋಟಿ ರೂ. ಮೌಲ್ಯದ ಸುಮಾರು 16 ಕೆ.ಜಿ.ಯಷ್ಟು ಮೆಫೆಡ್ರೋನ್‌ ಮಾದಕ ವಸ್ತುವನ್ನು ಮುಂಬೈನ ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಡಿ.4) ಡಿಆರ್‌ಐ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಮೂವರು ಆರೋಪಿಗಳಿಂದ ಅಂದಾಜು 1.9 ಕೋಟಿ ರೂಪಾಯಿಯ ನಗದದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಡಿಆರ್‌ಐ ಅಧಿಕಾರಿಗಳು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಇಬ್ಬರು ಶಂಕಿತರ ಮೇಲೆ ಕಣ್ಣಾಗವನ್ನಿಟ್ಟಿತ್ತು. ಬಳಿಕ ಮಂಗಳವಾರ(ಡಿ.3) ಬೆಳಗಿನ ಜಾವದ ವೇಳೆ ಬಸ್‌ನಲ್ಲಿ ಆರೋಪಿಗಳನ್ನು ಬಂಧಿಸಿ ಶೋಧ ನಡೆಸಿತ್ತು. ಈ ಶೋಧ ಸಮಯದಲ್ಲಿ ಆರೋಪಿಗಳ ಲಗ್ಗೇಜ್‌ ಬ್ಯಾಗ್‌ನಲ್ಲಿ ಸುಮಾರು 16 ಕೆ.ಜಿ. ಮೆಫೆಡ್ರೋನ್‌ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಆರೋಪಿಗಳ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರವಾಗಿ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಿ, ಮಧ್ಯವರ್ತಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ.

Tags: