Mysore
21
scattered clouds

Social Media

ಭಾನುವಾರ, 25 ಜನವರಿ 2026
Light
Dark

ಕರೂರು ಕಾಲ್ತುಳಿತ ಪ್ರಕರಣ: ಟಿವಿಕೆ ಜಿಲ್ಲಾ ಕಾರ್ಯದರ್ಶಿ ಮತಿಯಾಳಗನ್‌ ಬಂಧನ

karuru tamil actor vijay

ತಮಿಳುನಾಡು: ಟಿವಿಕೆ ಪಕ್ಷದ ಅಧ್ಯಕ್ಷರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜಕಾರಣಿ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂನ ಕರೂರ್‌ ಪಶ್ಚಿಮ ಜಿಲ್ಲಾ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ.

ಶನಿವಾರ ಸಂಭವಿಸಿದ್ದ ಕಾಲ್ತುಳಿತದಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದು, 60 ಜನರು ಗಾಯಗೊಂಡ ಘಟನೆಯಲ್ಲಿ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂವರು ಟಿವಿಕೆ ಪದಾಧಿಕಾರಿಗಳಲ್ಲಿ ಕರೂರ್‌ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ವಿ.ಪಿ.ಮತಿಯಾಳಗನ್‌ ಕೂಡ ಒಬ್ಬರಾಗಿದ್ದಾರೆ.

ಇದನ್ನು ಓದಿ : ಕರೂರು ಕಾಲ್ತುಳಿತ: ದುರಂತಕ್ಕೆ ಹೊಣೆ ಯಾರು?

ಇನ್ನು ಕರೂರು ಕಾಲ್ತುಳಿತ ದುರಂತದಿಂದ ಮನನೊಂದ ನಟ ವಿಜಯ್‌ ಪಕ್ಷದ ಮುಖಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಟಿವಿಕೆ ಪಕ್ಷದ ವಿರ್ಪಟ್ಟು ಗ್ರಾಮದ ಕಾರ್ಯದರ್ಶಿ ಅಯ್ಯಪ್ಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನವೇ ಅವರು ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಡೆತ್‌ನೋಟ್‌ನಲ್ಲಿ ಕಾಲ್ತುಳಿತ ದುರಂತದಿಂದ ಮನನೊಂದು ನೇಣಿಗೆ ಶರಣಾಗುತ್ತಿದ್ದೇನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Tags:
error: Content is protected !!