ಹೊಸದಿಲ್ಲಿ : ಇರಾನ್ – ಇಸ್ರೇಲ್ ಯುದ್ಧ ಎಂಟನೆ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಭಾರತ ಸಹ ಉದ್ಯಮದಲ್ಲಿ ನಷ್ಟ ಅನುಭವಿಸುತ್ತಿದ್ದು, ಇರಾನ್‌ಗೆ ರಫ್ತಾಗುತ್ತಿದ್ದ ಚಹಾ ಸ್ಥಗಿತಗೊಂಡಿದೆ.
ಅಲ್ಲದೇ, ಭಾರತ ಇರಾನ್‌ನಿಂದ ಕಚ್ಚಾ ತೈಲಾ ಹಾಗೂ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿತ್ತು, ಇದೀಗ ಇದಕ್ಕೂ ಹೊಡೆದ ಬಿದ್ದಿದೆ.
ರಷ್ಯಾ ಬಳಿಕ ಅತೀ ಹೆಚ್ಚು ಚಹಾ ರಫ್ತು ಮಾಡಿಕೊಳ್ಳುವುದು ಇರಾನ್. ಇದೀಗ ಇರಾನ್-ಇಸ್ರೇಲ್ ಯುದ್ಧದಿಂದ ರಫ್ತು-ಆಮದುಗಳು ಸ್ಥಗಿತವಾಗಿವೆ. ಕಳೆದ ವರ್ಷ 31 ಮಿಲಿಯನ್ ಕೆಜಿ ಚಹಾವನ್ನು ಭಾರತ, ಇರಾನ್‌ಗೆ ರಫ್ತು ಮಾಡಿತ್ತು. ಈ ವರ್ಷ ಇನ್ನು ಹೆಚ್ಚಿನ ರಫ್ತು ಮಾಡುವ ನಿರೀಕ್ಷೆ ಇತ್ತು. ಆದರೆ, ಯುದ್ಧದಿಂದ ರಫ್ತು ಬೆಳವಣಿಗೆ ಸ್ಥಗಿತವಾಗಿದೆ.
ಭಾರತ 2024 ರಲ್ಲಿ ಒಟ್ಟು 7111 ಕೋಟಿ ಮೌಲ್ಯದ 255ಮಿಲಿಯನ್ ಕೆಜಿ ಚಹಾವನ್ನು ಇರಾನ್‌ಗೆ ರಫ್ತು ಮಾಡಿತ್ತು.





