Mysore
32
broken clouds

Social Media

ಮಂಗಳವಾರ, 05 ಮೇ 2026
Light
Dark

ಇಂಡೊನೇಷ್ಯಾ: ಆತ್ಮಾಹುತಿ ಬಾಂಬ್ ದಾಳಿ, ಒಬ್ಬ ಸಾವು

ಬಾಂಡುಂಗ್: ಜಾವಾ ದ್ವೀಪದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಬ್ಬ ಮೃತಪಟ್ಟು, ೧೧ ಮಂದಿ ಗಾಯಗೊಂಡಿದ್ದಾರೆ. ಅಬು ಸಲೀಂ ಅಲಿಯಾಸ್‌ ಆಗಸ್ ಸುಜಾತ್ನೊ ಎಂಬ ಉಗ್ರ ಈ ದಾಳಿ ನಡೆಸಿದ್ದಾನೆ. ಎರಡು ಬಾಂಬ್‌ಗಳನ್ನು ಧರಿಸಿದ್ದ ಈತ ಬೈಕ್‌ನಲ್ಲಿ ಬಂದು ಅಸ್ತಾರ್ ಅನ್ಯಾರ್ ಎಂಬಲ್ಲಿನ ಪೊಲೀಸ್ ಠಾಣೆಗೆ ನುಗ್ಗಿ, ಒಂದು ಬಾಂಬ್ ಅನ್ನು ಸ್ಛೋಟಿಸಿದ್ದಾನೆ. ಪೊಲೀಸರು ಮತ್ತೊಂದು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದರು ಎಂದು ನಗರ ಪೊಲೀಸ್ ಮುಖ್ಯಸ್ಥ ಅಸ್ವಿನ್ ಸಿಪಾಯಾಂಗ್ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!