ತಿರುವಂತನಪುರಂ: ಕೇರಳ ರಾಜ್ಯಕ್ಕೆ ಅನುದಾನ ಬೇಕಿದ್ದರೆ ಹಿಂದುಳಿದ ರಾಜ್ಯವೆಂದು ಘೋಷಿಸಲಿ ಎಂದು ಕೇಂದ್ರ ಸಚಿವ ಜಾರ್ಜ್ ಕುರಿಯನ್ ಹೇಳಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೇರಳ ರಾಜ್ಯವನ್ನು ಕಡೆಗಣಿಸಿದೆ ಎಂದು ರಾಜ್ಯದ ಮುಖ್ಯಮಂತ್ರಿ ಆರೋಪಿಸಿದ್ದರು.
ಕೇರಳ ರಾಜ್ಯದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುರಿಯನ್, ಕೇರಳ ರಾಜ್ಯವು ಕೇಂದ್ರದಿಂದ ಹೆಚ್ಚು ಅನುದಾನ ಪಡೆಯಬೇಕು ಅಂದರೆ ಹಿಂದುಳಿದ ರಾಜ್ಯವೆಂದು ಘೋಷಿಸಲಿ. ಜೊತೆಗೆ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ ಎಂದು ತೋರಿಸಿಕೊಳ್ಳಲಿ. ರಸ್ತೆ ಸರಿಯಿಲ್ಲ, ಉತ್ತಮ ಶಿಕ್ಷಣವಿಲ್ಲ, ಮೂಲ ಸೌಕರ್ಯಗಳಿಲ್ಲ ಎಂದು ನೀವು ಘೋಷಿಸಿ. ಆನಂತರ ಕೇಂದ್ರದಿಂದ ನಿಮಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ಹೇಳಿದ್ದಾರೆ.
ಸಚಿವರ ಈ ಹೇಳಿಕೆ ತೀವ್ರ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಯು ಕೇರಳ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ರಾಜ್ಯದ ಆಡಳಿತ ಪಕ್ಷದ ನಾಯಕರು ಕಿಡಿಕಾರಿದ್ದಾರೆ.
ಕಳೆದ ಜುಲೈನಲ್ಲಿ ವಯನಾಡ್ ಭೂಕುಸಿತಕ್ಕೆ ಸಂಬಂಧಿಸಿದಂತೆ ಅನುದಾನ ಹಾಗೂ 24,000ರೂ.ಗಳ ವಿಶೇಷ ಪ್ಯಾಕೆಜ್ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಕೇಂದ್ರ ಬಜೆಟ್ ಮಂಡನೆಯ ನಂತರ ಕೇರಳ ಸಿಎಂ ಪಿಣರಾಯಿ ವಿಜಯನ್ ಇದು ನಿರಾಶಾದಾಯಕ ಬಜೆಟ್ ಎಂದು ಅಸಮಾಧಾನ ಹೊರಹಾಕಿದ್ದಾರೆ.