ವಾಷಿಂಗ್ಟನ್: ಭಾರೀ ಹವಾಮಾನ ವೈಪರೀತ್ಯದಿಂದಾಗಿ ವಿಶ್ವದ ದೊಡ್ಡಣ್ಣ ಅಮೇರಿಕಾ ತತ್ತರಿಸಿ ಹೋಗಿದ್ದು, ಇಲ್ಲಿನ ಆಗ್ನೇಯ ಭಾಗದ ಕೆಂಟಕಿಯಲ್ಲಿ ಮಳೆಯಿಂದ ಹಠಾತ್ ಪ್ರವಾಹ ಉಂಟಾಗಿದೆ.
15 ಸೆಂಟಿ ಮೀಟರ್ ಮಳೆಯಿಂದ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಪ್ರವಾಹದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರವಾಹದಿಂದ ಹಲವು ಮಂದಿ ನಾಪತ್ತೆಯಾಗಿದ್ದು, ಇಲ್ಲಿಯವರೆಗೆ ಒಂದು ಸಾವಿರ ಮಂದಿಯನ್ನು ರಕ್ಷಿಸಲಾಗಿದೆ. ಬಲವಾದ ಗಾಳಿ ಬೀಸುತ್ತಿರುವ ಪರಿಣಾಮ 40 ಸಾವಿರಕ್ಕೂ ಹೆಚ್ಚಿನ ಮನೆಗಳು ಕತ್ತಲಲ್ಲಿ ಮುಳುಗಿ ಹೋಗಿವೆ.
ಇನ್ನು ಅಮೇರಿಕಾದ ಉತ್ತರ ಪ್ರಾಂತ್ಯದಲ್ಲಿ ಕೊರೆವ ಚಳಿಗೆ ಜನ ತತ್ತರಿಸಿ ಹೋಗಿದ್ದಾರೆ. ನಾರ್ತ್ ಡಕೋಟಾ, ಸೌತ್ ಡಕೋಟಾದ ಕೆಲವೆಡೆ ಉಷ್ಣಾಂಶ -45 ಡಿಗ್ರಿಗೆ ಕುಸಿದಿದೆ.