ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.
ಸಂವಿಧಾನದ ವಿಧಿ 80(1)(ಎ)ಯಿಂದ ನೀಡಲಾದ ಅಧಿಕಾರಿಗಳ ಅಡಿಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಲ್ವರು ಗಣ್ಯ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ.
ಈ ಹಿಂದೆ ನಾಮನಿರ್ದೇಶಿತ ಸದಸ್ಯರ ನಿವೃತ್ತಿಯಿಂದ ಉಳಿದಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈ ನಾಮನಿರ್ದೇಶನಗಳನ್ನು ಮಾಡಲಾಗಿದೆ. ಉಜ್ವಲ್ ದೇವರಾವ್ ನಿಕಮ್, ಸಿ ಸದಾನಂದ ಮಾಸ್ಟರ್, ಹರ್ಷವರ್ಧನ್ ಶ್ರಿಂಗ್ಲಾ, ಮೀನಾಕ್ಷಿ ಜೈನ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಉಜ್ವಲ್ ದೇವರಾಮ್ ನಿಕಮ್: ಮುಂಬೈ ಭಯೋತ್ಪಾದಕ ದಾಳಿ ಸೇರಿದಂತೆ ಹಲವಾರು ಉನ್ನತ ಮಟ್ಟದ ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾದ ಪ್ರಸಿದ್ಧ ಪಬ್ಲಿಕ್ ಪ್ರಾಸಿಕ್ಯೂಟರ್.
ಸಿ.ಸದಾನಂದ ಮಾಸ್ಟರ್: ದಶಕಗಳ ತಳಮಟ್ಟದ ಅನುಭವ ಹೊಂದಿರುವ ಕೇರಳದ ಗೌರವಾನ್ವಿತ ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ.
ಹರ್ಷವರ್ಧನ್ ಶ್ರಿಂಗ್ಲಾ: ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು, ಈ ಹಿಂದೆ ಅಮೆರಿಕಾದಲ್ಲಿ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದರು.
ಮೀನಾಕ್ಷಿ ಜೈನ್: ಇವರು ಇತಿಹಾಸಕಾರರು ಹಾಗೂ ಶಿಕ್ಷಣ ತಜ್ಞೆಯಾಗಿದ್ದು, ಭಾರತೀಯ ಇತಿಹಾಸ ಮತ್ತು ನಾಗರಿಕತೆಯ ಕುರಿತಾದ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ.
ಹಿಂದಿನ ನಾಮನಿರ್ದೇಶಿತ ಸದಸ್ಯರ ನಿವೃತ್ತಿಯಿಂದಾಗಿ ಖಾಲಿ ಸ್ಥಾನಗಳು ಬೀಳುವ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಡಲಾಗಿದೆ.





