Mysore
21
clear sky

Social Media

ಶನಿವಾರ, 03 ಜನವರಿ 2026
Light
Dark

ಪ್ರಾಥಮಿಕ ವರದಿ ಕುರಿತು ಆತುರದ ನಿರ್ಧಾರ ಬೇಡ: ನಾಗರಿಕ ವಿಮಾನಯಾನ ಸಚಿವರ ಮನವಿ

Don't Rush Decisions Based on Preliminary Report: Appeal by Civil Aviation Minister

ವಿಶಾಖಪಟ್ಟಣ: ಗುಜರಾತ್‍ನ ಅಹಮಾದಾಬಾದ್‍ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಪ್ರಕರಣ ಸಂಬಂಧ ಪ್ರಾಥಮಿಕ ವರದಿ ಕುರಿತು ಆತುರದ ತೀರ್ಮಾನಗಳಿಗೆ ಬರಬೇಡಿ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

ವಿಶಾಖಪಟ್ಟಣದಲ್ಲಿ ಮಾತನಾಡಿದ ಅವರು, ನಾವು ಪೈಲಟ್‍ಗಳ ಕಲ್ಯಾಣ ಮತ್ತು ಯೋಗಕ್ಷೇಮದ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಆದ್ದರಿಂದ ಈ ಹಂತದಲ್ಲಿ ಯಾವುದೇ ತೀರ್ಮಾನಗಳಿಗೆ ಧಾವಿಸಬೇಡಿ ಮತ್ತು ಅಂತಿಮ ವರದಿಗಾಗಿ ಕಾಯೋಣ ಎಂದು ಮನವಿ ಮಾಡಿದರು.

ಕಳೆದ ತಿಂಗಳು ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ ನೀಡಿದ ವರದಿಯು ಪ್ರಾಥಮಿಕ ಸಂಶೋಧನೆಗಳನ್ನು ಆಧರಿಸಿದೆ ಮತ್ತು ಅಂತಿಮ ವರದಿ ಬಿಡುಗಡೆಯಾಗುವವರೆಗೆ ಯಾರೂ ತೀರ್ಮಾನಗಳಿಗೆ ಬರಬಾರದು ಎಂದು ಕೋರಿದ್ದಾರೆ.

ಇದರ ಬಗ್ಗೆ ನಾವು ಯಾವುದೇ ತೀರ್ಮಾನಗಳಿಗೆ ಧಾವಿಸಬಾರದು ಎಂದು ನಾನು ಭಾವಿಸುತ್ತೇನೆ. ಇಡೀ ವಿಶ್ವದಲ್ಲೇ ಅತ್ಯಂತ ಅದ್ಭುತವಾದ ಪೈಲಟ್‍ಗಳು ಮತ್ತು ಸಿಬ್ಬಂದಿ ನಮಲ್ಲಿದ್ದಾರೆ ಎಂದು ನಾನು ನಂಬುತ್ತೇನೆ. ದೇಶದ ಪೈಲಟ್‍ಗಳು ಮತ್ತು ಸಿಬ್ಬಂದಿ ಮಾಡುತ್ತಿರುವ ಎಲ್ಲಾ ಪ್ರಯತ್ನಗಳನ್ನು ನಾನು ಪ್ರಶಂಸಿಸಲೇಬೇಕು, ಅವರು ನಾಗರಿಕ ವಿಮಾನಯಾನದ ಬೆನ್ನೆಲುಬು. ಅವರು ನಾಗರಿಕ ವಿಮಾನಯಾನದ ಪ್ರಾಥಮಿಕ ಸಂಪನ್ಮೂಲ. ನಾವು ಪೈಲಟ್‍ಗಳ ಕಲ್ಯಾಣ ಮತ್ತು ಯೋಗಕ್ಷೇಮದ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಆದ್ದರಿಂದ ಈ ಹಂತದಲ್ಲಿ ಯಾವುದೇ ತೀರ್ಮಾನಗಳಿಗೆ ಧಾವಿಸಬೇಡಿ ಮತ್ತು ಅಂತಿಮ ವರದಿಗಾಗಿ ಕಾಯೋಣ ಎಂದು ತಿಳಿಸಿದರು.

Tags:
error: Content is protected !!