Mysore
23
haze

Social Media

ಬುಧವಾರ, 10 ಡಿಸೆಂಬರ್ 2025
Light
Dark

ನೊಬೆಲ್‌ ಶಾಂತಿ ಪ್ರಶಸ್ತಿಗೆ ಡೊನಾಲ್ಡ್‌ ಟ್ರಂಪ್‌ ನಾಮನಿರ್ದೇಶನ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು

Donald Trump, benjamin netanyahu

ವಾಷಿಂಗ್ಟನ್:‌ ನೊಬೆಲ್‌ ಶಾಂತಿ ಪ್ರಶಸ್ತಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಾಮ ನಿರ್ದೇಶಕ ಮಾಡಿದ್ದಾರೆ.

ಶಾಂತಿಯನ್ನು ರೂಪಿಸುವಲ್ಲಿ ಅವರ ಪಾತ್ರಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ನಾಮನಿರ್ದೇಶನ ಮಾಡಿದ್ದಾರೆ.

ಶ್ವೇತಭವನದಲ್ಲಿ ಅವರ ಭೋಜನಕೂಟದ ಸಮಯದಲ್ಲಿ ನೆತನ್ಯಾಹು ಅವರು ಬಹುಮಾನ ಸಮಿತಿಗೆ ಕಳುಹಿಸಿದ ನಾಮನಿರ್ದೇಶನ ಪತ್ರದ ಪ್ರಶಸ್ತಿಯನ್ನು ಸಹ ನೀಡಿದ್ದಾರೆ.

ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಟ್ರಂಪ್‌ ಅವರ ಶಾಂತಿ ಹಾಗೂ ಭದ್ರತೆಯನ್ನು ಅನುಸರಿಸುವ ಪ್ರಯತ್ನಗಳನ್ನು ನೆತನ್ಯಾಹು ಶ್ಲಾಘಿಸಿದ್ದಾರೆ.

ಧೀರ್ಘಕಾಲದಿಂದ ಶಾಂತಿಪ್ರಿಯ ಎಂದು ಘೋಷಿಸಿಕೊಂಡಿರುವ ಡೊನಾಲ್ಡ್‌ ಟ್ರಂಪ್‌, ನಾಮನಿರ್ದೇಶನದಿಂದ ಆಶ್ಚರ್ಯಚಕಿತರಾದಂತೆ ತೋರುತ್ತಿತ್ತು. ಅವರು ನೆತನ್ಯಾಹುಗೆ ಧನ್ಯವಾದ ಹೇಳುತ್ತಾ. ಇದು ನನಗೆ ಗೊತ್ತಿರಲಿಲ್ಲ. ವಾಹ್‌ ತುಂಬಾ ಧನ್ಯವಾದಗಳು. ವಿಶೇಷವಾಗಿ ನಿಮ್ಮಿಂದ ಬಂದಿರುವುದು, ಇದು ತುಂಬಾ ಅರ್ಥಪೂರ್ಣವಾಗಿದೆ ಎಂದು ಹೇಳಿದ್ದಾರೆ.

Tags:
error: Content is protected !!