ವ್ಯಾಟಿಕನ್ : ಕಳೆದ ಸೋಮವಾರ ನಿಧನರಾದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ವ್ಯಾಟಿಕನ್ ಸಿಟಿಯ ಬೆಸಿಲಕಾದಾ ಸಾಂಟಾ ಮಾರಿಯ ಮ್ಯಾಗಿಯೋರ್‌ನಲ್ಲಿ ಆರಂಭವಾಗಿದೆ. ಜಗತ್ತಿಗ ಅನೇಕ ಗಣ್ಯರಯ ಪಾಲ್ಗೊಂಡಿದ್ದಾರೆ.
ಪೋಪ್ ಅವರ ಅಂತಿಮ ದರ್ಶನಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಅಂತ್ಯಕ್ರಿಯೆಯನ್ನು ಪೋಪ್ ಅವರ ಮಾತಿನಂತೆ ಸರಳ ವಿಧಾನದಲ್ಲೆ ನಡೆಸಲಾಗುತ್ತಿದೆ. ಇದೇ ಮಾದರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.
ಕಳೆದ ಭಾನುವಾರ ಈಸ್ಟರ್ ದಿನದಂದು ಸಾರ್ವಜನಿಕರಿಗೆ ದರ್ಶನ ನೀಡಿದ 88 ವರ್ಷದ ಪೋಪ್ ಸೋಮವಾರ ನಿಧನರಾದರು. ಶನಿವಾರ(ಏ.26) ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ, ಪ್ರಾನ್ಸ್, ಅರ್ಜೇಂಟೀನಾ ಹಾಗೂ ವಿಶ್ವಸಂಸ್ಥೆಯ ಅಧ್ಯಕ್ಷರು ಸೇರಿದಂತೆ ಐರೋಪ್ಯ ಒಕ್ಕೂಟದ ಮುಖಂಡರು ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಅಂತಿಮ ದರ್ಶನದಲ್ಲಿ ಭಾರಿ ಭದ್ರತೆ ಇರಲಿದೆ.
ಭಾರತದ ವಿದೇಶಾಂಗ ಸಚಿವ ಕಿರಣ್ ರಿಜಿಜು, ಸಚಿವ ಜಾರ್ಜ್ ಕುರಿಯನ್, ಗೋವಾ ವಿಧಾನಸಭೆಯ ಉಪಸಭಾಪತಿ ಜೋಶ್ವಾ ಡಿ ಸೋಜಾ, ಕರ್ನಾಟಕದ ಸಚಿವ ಕೆ.ಜೆ ಜಾರ್ಜ್ ಮತ್ತು ಐವಾನ್ ಡಿಸೋಜಾ ಪಾಲ್ಗೊಳ್ಳುತ್ತಿದ್ದಾರೆ. ಅಂತ್ಯಕ್ರಿಯೆಯು ಸರಳವಾಗಿ ಸಮಾಧಿಗೆ ಸಿದ್ಧತೆ ನಡೆದಿದೆ. ಸಮಾಧಿ ಮೇಲೆ ಫ್ರಾನ್ಸಿಸ್ ಎಂದಷ್ಟೇ ಇರಲಿದೆ.



