ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ ನಿಯಮವನ್ನು ಬದಲಿಸಿದೆ.
ಸಿಬ್ಬಂದಿಗಳ ಕರ್ತವ್ಯ ಮಿತಿ ಮಾನದಂಡಗಳ ಪ್ರಕಾರ ವಾರದ ವಿಶ್ರಾಂತಿ ಜೊತೆ ಯಾವುದೇ ರಜೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅಂದರೆ ವಾರದ ವಿಶ್ರಾಂತಿ ಅವಧಿ ಹಾಗೂ ರಜೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.
ಪೈಲಟ್‌ಗಳಲ್ಲಿ ಹೆಚ್ಚಿನ ಕೆಲಸದ ಒತ್ತಡಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗಿದೆ. ವಿಮಾನಯಾನ ಸಿಬ್ಬಂದಿಗಳ ವಾರದ ವಿಶ್ರಾಂತಿ ರಜೆಯನ್ನು ಬದಲಾಯಿಸಬಹುದು ಎಂಬ ನಿಬಂಧನೆಯನ್ನು ಹಿಂಪಡೆದುಕೊಳ್ಳಲು ಡಿಜಿಸಿಎ ನಿರ್ಧರಿಸಿದೆ.





